88929 25504
 
  • Total Visitors: 3750704
  • Unique Visitors: 309655
  • Registered Users: 35961

Error message

  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).
  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).
  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).
  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).
  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).
  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).
  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).
  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).
  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).
  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).
  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).
  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).
  • Deprecated function: implode(): Passing glue string after array is deprecated. Swap the parameters in drupal_get_feeds() (line 394 of /home4/devan1ay/public_html/includes/common.inc).

ದೇವಾಂಗ ಸಂಘದ ದೇವಾಂಗ ಟವರ್ ಉದ್ಘಾಟನೆ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ

 

 

 

ದೇವಾಂಗ ಟವರ್ ಉದ್ಘಾಟನೆ
ದಿನಾಂಕ : 13-01-2016 
ಬುಧವಾರ
ಸಮಯ : ಸಂಜೆ 4.30 ಗಂಟೆಗೆ 
ಸ್ಥಳ : ಕೆಂಪೇಗೌಡ ರಸ್ತೆ, ಬೆಂಗಳೂರು

 

ಹಂಪಿ ಹೇಮಕೂಟ ಶ್ರೀ ಗಾಯತ್ರಿ ಪೀಠ ಮಹಾ ಸಂಸ್ಥಾನಾಧೀಶ್ವರ ನೇಕಾರ ದೇವಾಂಗ ಜಗದ್ಗುರು ಶ್ರೀ ಶ್ರೀ ಶ್ರೀ ದಯಾನಂದ ಪುರಿ ಮಹಾಸ್ವಾಮೀಜಿ ರವರ ದಿವ್ಯ ಸಾನಿಧ್ಯದಲ್ಲಿ

 

ಉದ್ಘಾಟನೆ : ಶ್ರೀ ಸಿದ್ದರಾಮಯ್ಯ ಸನ್ಮಾನ್ಯ ಮುಖ್ಯಮಂತ್ರಿಗಳು,
ಕರ್ನಾಟಕ ಸರ್ಕಾರ.

 

ಅಧ್ಯಕ್ಷತೆ : ಶ್ರೀ ಸ.ಸೂರ್ಯನಾರಾಯಣ
ಅಧ್ಯಕ್ಷರು,
ದೇವಾಂಗ ಸಂಘ

 

ವಿಶೇಷ ಆಹ್ವಾನಿತರು

 

ಶ್ರೀ ಅನಂತಕುಮಾರ್ ಮಾನ್ಯ ಕೇಂದ್ರ ಸಚಿವರು ರಾಸಾಯನಿಕ ಮತ್ತು ರಸಗೊಬ್ಬರ,
ಭಾರತ ಸರ್ಕಾರ.

 

ಶ್ರೀಮತಿ ಉಮಾಶ್ರೀ
ಮಾನ್ಯ ಸಚಿವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ,
ಕರ್ನಾಟಕ ಸರ್ಕಾರ.

 

ಶ್ರೀ ಆರ್. ರೋಷನ್ ಬೇಗ್
ಮಾನ್ಯ ಸಚಿವರು ಮೂಲಭೂತ ಸೌಲಭ್ಯ ಮತ್ತು ವಾರ್ತಾ ಹಾಗೂ ಹಜ್,
ಕರ್ನಾಟಕ ಸರ್ಕಾರ.

 

ಶ್ರೀ ದಿನೇಶ್ ಗುಂಡೂರಾವ್
ಮಾನ್ಯ ಸಚಿವರು ಆಹಾರ ಮತ್ತು ನಾಗರಿಕ ಸರಬರಾಜು,
ಕರ್ನಾಟಕ ಸರ್ಕಾರ.

 

ಶ್ರೀ ಪಿ.ಸಿ.ಮೋಹನ್
ಮಾನ್ಯ ಸಂಸದರು, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ.

 

ಶ್ರೀ ಎಂ.ಡಿ.ಲಕ್ಷ್ಮೀನಾರಾಯಣ್
ಮಾನ್ಯ ವಿಧಾನ ಪರಿಷತ್ ಸದಸ್ಯರು.

 

ಶ್ರೀಮತಿ ಆರ್. ಜೆ.ಲತಾ ರಾಥೋಡ್
ಮಾನ್ಯ ಬಿ.ಬಿ.ಎಮ್. ಪಿ ಸದಸ್ಯರು.

 

ಆಡಳಿತ ಮಂಡಳಿಯು
ಸರ್ವರಿಗೂ ಆದರದ ಸ್ವಾಗತಿಸಿದೆ

 

ನಿಮ್ಮ ಮಾಹಿತಿಗಾಗಿ ನಿಮ್ಮವ,
ಮಹಾಪೋಷಕರು
ಮಾಜಿ ಕೋಶಧಿಕಾರಿಗಳು

 

 

 

ಹಿಂದುಳಿದ ವರ್ಗದ ನೇಕಾರ ಸಮಾಜದ ದೊಡ್ಡಣ್ಣ ಪಾತ್ರ ವಹಿಸಿರುವ ದೇವಾಂಗ ಸಂಘ ನಡೆದು ಬಂದ ದಾರಿಯ ನೆನಯು ಸಂದರ್ಭ.

ದೇವಾಂಗ ಜನಾಂಗವು ಬೆಂಗಳೂರಿನ ಮೂಲ ನೆವಾಸಿಗಳಾಗಿದ್ದು, ಮೈಸೂರು ಸಂಸ್ಥಾನದ ರಾಜರಾದ ಕೃಷ್ಣರಾಜರ ಓಡೆಯರ ಕಾಲದಲ್ಲಿ ಕುಶಲಕರ್ಮಿಗಳನ್ನು ಕರೆಸಿ ಬೆಂಗಳೂರು ನಗರದಲ್ಲಿ ಮೊದಲನೆಯದಾಗಿ ನೂರಾರು ಎಕರೆ ಪ್ರದೇಶದಲ್ಲಿ ಬಡಾವಣೆಗಳನ್ನು ನಿರ್ಮಿಸಿ ದೇವಾಂಗ ಜನಾಂಗದವರಿಗೆ ದೇವಾಂಗ ಪೇಟೆ ಎಂದು ಹೆಸರು ಕೊಟ್ಟು ಬಡಾವಣೆ ನಿರ್ಮಿಸಿದರು. ಕನ್ನಡ, ತೆಲುಗು ಮತ್ತು ಶಿವಾಚಾರ ದೇವಾಂಗದವರು ಆ ಬಡಾವಣೆಯಲ್ಲಿ ಶೆಟ್ರು ಯಜಮಾನರನ್ನು ನೇಮಕ ಮಾಡಿಕೊಂಡು ಅವರು ತೋರಿಸಿದ ಮಾರ್ಗದಲ್ಲಿ ಜೀವನ ನಡೆಸಿಕೊಂಡು ಬರುತ್ತಿದ್ದರು. ಈ ಮೂರೂ ಪಂಗಡಗಳ ಪ್ರಯತ್ನದ ಫಲವಾಗಿ ಶ್ರೀ ಪ್ರಸನ್ನ ಪಾರ್ವತಿ ಸಮೇತ ಶ್ರೀ ರಾಮಲಿಂಗ ಚಂದ್ರ ಚೌಡೇಶ್ವರಿ ದೇವಿ ದೇವಸ್ಥಾನ ನಿರ್ಮಾಣವಾಯಿತು. ಪ್ರತಿಯೊಂದು ಪಂಗಡದವರು ೪ ತಿಂಗಳ ಪೂಜಾ ವಿಧಾನಗಳನ್ನು ನಡೆಸಿಕೊಂಡು ಬರುತ್ತಿದ್ದರು. ದೇವಾಂಗ ಜನಾಂಗದವರು ತಮ್ಮ ಮನೆಗಳ ಶುಭ ಕಾರ್ಯದಲ್ಲಿ ಅಂದರೆ ವಿವಾಹ ಕಾಲದಲ್ಲಿ ವಧು ವರರನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಕುಲದೇವತೆ ಆಶೀರ್ವಾದ ಪಡೆಯುತ್ತಿದ್ದರು. ಕ್ರಮೇಣವಾಗಿ ಎಲ್ಲರೂ ಒಗ್ಗೂಡಲು ಶೆಟ್ಟರು ಯಜಮಾನರುಗಳ ಮುಂದಳಾತ್ವದಲ್ಲಿ ನಡೆಯುತ್ತಿದ್ದರು, 28 ಪೇಟೆಗೆ 28 ಶೆಟ್ಟರು ಯಜಮಾನರನ್ನು ಹಾಗೂ 28 ಜನರಿಗೆ ಒಬ್ಬರು ನಾಯಕರನಾಗಿ ಶೆಟ್ಟರು ಯಜಮಾನ್ ಅವರನ್ನು ನೇಮಕ ಮಾಡಿಕೊಂಡು ನಡೆಯಲು ಪ್ರಾರಂಭವಾಯಿತು.

1903ರಲ್ಲಿ ದೇವಾಂಗ ಜನಾಂಗದ ಹತ್ತು ಮಂದಿ ಸೇರಿ ದಕ್ಷಿಣಕಾಶಿ ಎನಿಸಿದ ಗವೀಪುರದಲ್ಲಿ ಜವಳಿ ಅಂಗಡಿ ಬಿ. ಅಪ್ಪಾಜಪ್ಪ ನವರಿಂದ 941/2 x 76 1/2 ಅಡಿ ವಿಸ್ತೀರ್ಣದ ಖಾಲಿ ಜಮೀನನ್ನು ಕರಾರಿನಲ್ಲಿ ಪಡೆದು ಕೊಂಚ ಭಾಗವನ್ನು ತುಮಕೂರು ತಿಮ್ಮಯ್ಯ ನವರಿಗೆ ಛತ್ರವನ್ನು ಕಟ್ಟಲು ನೀಡಿ, ಉಳಿದ ಜಾಗವನ್ನು ದೇವಾಂಗ ಜನಾಂಗದ ಹತ್ತು ಮಂದಿ ಛತ್ರವನ್ನು ಪ್ರಯತ್ನ ಮಾಡಿ ಕಟ್ಟಿದರು. ಮದುವೆ ಮುಂತಾದ ಶುಭ ಸಮಾರಂಭಗಳು ನಡೆಯುತ್ತಿದ್ದವು, ಅದಕ್ಕೂ ಮೊದಲು ವಿವಾಹಾದಿ ಶುಭ ಕಾರ್ಯಗಳು ಪ್ರತಿಷ್ಠಿತರ ಹಜಾರಗಳಲ್ಲಿ ನಡೆಯುತ್ತಿದ್ದವು. ಮೇಲೆ ತಿಳಿಸಿದಂತೆ ಶೆಟ್ರು ಯಜಮಾನರ ಆಳ್ವಿಕೆಯಲ್ಲಿ ವಿವಾಹ ಮತ್ತು ಶುಭ ಕಾರ್ಯಗಳಲ್ಲಿ ಜನಾಂಗದವರು ಶೆಟ್ರು ಯಜಮಾನರುಗಳಿಗೆ ಕಾಣಿಕೆ, ಗೌರವ ನೀಡುತ್ತಿದ್ದರು. 28 ಪೇಟೆ ಶೆಟ್ರು ಯಜಮಾನರುಗಳಿದ್ದು ಅವರುಗಳಲ್ಲಿ ಜನಾಂಗದವರು ಸುಖ ಜೀವನ ನಡೆಸುತ್ತಿದ್ದರು.
ನೇಕಾರಿಕೆ ಕುಲ ಕಸುಬು ವಿದ್ಯಾಬ್ಯಾಸ ಅಗಣ್ಯ. ಈ ರೀತಿ ಜೀವನ ಸಾಗಿತ್ತು.

1920ರಲ್ಲಿ ಬೆಂಗಳೂರಿನ ದೇವಾಂಗ ಜನಾಂಗದ ಮುಂದಾಳುಗಳಗಿದ್ದ
28 ಪೇಟೆಗಳ ಯಜಮಾನರಿಗೆ ಯಜಮಾನರದ ಯಜಮಾನ್ ಎಣ್ಣೆಗೆರೆ ಚಿಕ್ಕವೆಂಕಟಪ್ಪ, ಡಿ.ಆದೆಪ್ಪ, ಮರಡಿ ಸುಬ್ಬಯ್ಯ, ಮುನಿಸುಬ್ಬರಾಯಪ್ಪ, ಸೌದೆ ಅಂಗಡಿ ಚೌಡಪ್ಪ, ಮಹಡಿಮನೆ ಯಜಮಾನ್ ಮುನಿಶಂಕರಪ್ಪ, ಚಾಮರಾಜಪೇಟೆ ಬಸಯ್ಯ, ಗಂಟೇ ದೊಡ್ಡಣ್ಣ ಮುಂತಾದವರು ಶ್ರೀ ರಾಮಲಿಂಗ ಚಂದ್ರ ಚೌಡೇಶ್ವರೀ ದೇವಸ್ಥಾನದಲ್ಲಿ ಸಭೆ ಸೇರಿ ನಮ್ಮ ಜನಾಂಗದ ಏಳಿಗೆ ವಿದ್ಯಾ ಪ್ರಗತಿಗಳಾಗಿ ಒಂದು ಸಂಘ ಕಟ್ಟಲು ಯೋಚಿಸಿದರು. ಆ ಸಭೆಗೆ ದಯಮಾಡಿಸಿದ್ದ ಸರ್ಕಾರದ ಉನ್ನತ ಅಧಿಕಾರಿಗಳಾದ ಶ್ರೀ ಕೆ.ಹೆಚ್.ರಾಮಯ್ಯ, ಬಿ.ಎ. ಬಾರ್ ಅಟ್ ಲಾರವರು ಸಂಘದ ಸ್ಥಪನೆಗೆ ಹುರಿದುಂಬಿಸಿ ವಿದ್ಯಯಲ್ಲೇ ಅಲ್ಲದೇ, ದೇವಾಂಗದವರು ತಮ್ಮ ಕುಲ ಕಸುಬಿನಲ್ಲೂ ಮುನ್ನಡೆ ಸಾಧಿಸಬಹುದೆಂದು ತಿಳಿಸಿ ತಮ್ಮ ಒಕ್ಕಲಿಗರ ಸಂಘ ಸ್ಥಾಪನೆ ಆದಂದಿನಿಂದ ಅವರ ಜನಾಂಗದವರು ವಿದ್ಯೆಯಲ್ಲಿ ಮುಂದುವರಿದ ಉದಾಹರಣೆಗಳನ್ನು ನೀಡಿದರು.
1921ರಲ್ಲಿ ಗುಂತಕಲ್ಲಿನ ರಾಯ್ ಸಾಹೇಬ್, ಎಂ. ಹಂಪಯ್ಯನವರು ದೇವಂಗ ಸಂಘ ಸ್ಥಾಪಿಸಿ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಿದಲ್ಲಿ ನಮ್ಮವರೂ ಮುನ್ನಡೆಯಲು ಅವಕಾಶ ವಾಗುತ್ತೆಂದು ಶ್ರೀ ಮರಡಿ ಸುಬ್ಬಯ್ಯನವರಲ್ಲಿ ಆಸಕ್ತಿ ಕೆರಳಿಸಿದರು. ಜನಾಂಗದವರಲ್ಲಿ ಒಮ್ಮತ ಸಾಧಿಸಲು ದೇವಂಗ ಮಹಾಸಭೆ ಕರೆಯಲು ಜನಾಂಗದವರಿಂದ ರೂ. 1500/- ವಸೂಲಾಗಿದ್ದು ಅದು ನೆರವೇರಲಿಲ್ಲ.

1922ರಲ್ಲಿ ಎಂ. ಹಂಪಯ್ಯನವರು ದೇವಾಂಗ ಸಂಘ ಸ್ಥಾಪನೆಗೆ ಒತ್ತಾಯ ಪಡಿಸಿ ಶ್ರೀ ಡಿ. ಎ. ಆದಿನಾರಾಯಣರವರು ಕಾರ್ಯದರ್ಶಿ ಆಗಿರಬೇಕೆಂದು ಸೂಚಿಸಿದರು. ಮೈಸೂರು ಸಂಸ್ಥಾನದಲ್ಲಿ ದೇವಾಂಗ ಸಮಾಜದ ಇತಿಹಸದಲ್ಲಿ 1923 ಡಿಸೆಂಬರ್ 23ನೇ ತೇದಿ ಚಿರಸರಣೀಯ ದಿನ, ಬೆಂಗಳೂರು ನಗರದಲ್ಲಿ ಶ್ರೀ ಡಿ.ಸಿ. ಸುಬ್ಬರಾಯಪ್ಪನವರ ಅಧ್ಯಕ್ಷತೆಯಲ್ಲಿ ದೇವಾಂಗ ಸಮಾಜದ ಹಿರಿಯ ವ್ಯಕ್ತಿಗಳು ಸೇರಿ ಸಭೆಯಲ್ಲಿ ದೇವಾಂಗ ಜನಾಂಗದ ಸ್ಥಿತಿಗತಿಗಳನ್ನು ಸುಧಾರಿಸಲು ದೇವಾಂಗ ಸಂಘವನ್ನು ಸ್ಥಪಿಸಭೇಕೆಂದು ತೀರ್ಮಾನಿಸಿ ಶ್ರೀಗಳಾದ ಕೆ.ವಿ. ನಂಜಪ್ಪ, ಕೆ.ಎನ್. ರಾಮ, ಡಿ.ಎ. ಆದಿನಾರಾಯಣ ಮತ್ತು ಕೆ.ಎನ್. ವೀರಭದ್ರಯ್ಯ ಇವರಿರುವ ಒಂದು ಉಪಸಮಿತಿ ರಚಿಸಿ ಸಂಘದ ಉದ್ದೇಶ, ನಿಬಂಧನೆಗಳನ್ನು ತಯಾರಿಸಿ ಸಲ್ಲಿಸುವಂತೆ ಆದೇಶ ನೀಡಲಾಯಿತು. ನೇಮಿತ ಉಪಸಮಿತಿ ರಚಿಸಿದ ಕರಡು ನಿಬಂಧನೆಗಳ ಆಧರಾದ ಮೇಲೆ ದೇವಾಂಗ ಸಂಘ 12-02-1924 ರಲ್ಲಿ (1904ನೇ ಇಸವಿಯ ಮೈಸೂರು 3ನೇ ಕಾನೂನು ಪ್ರಕಾರ) ನೊಂದಾಯಿಸಲಾಯಿತು. ಕರಡು ನಿಬಂಧನೆಯ ದಸ್ಕತ್ತಿಗೆ ಶ್ರೀಗಳಾದ ಮರಡಿ ಸುಬ್ಬಯ್ಯ, ಹೊಸಮನೆ ಕೆಂಚಪ್ಪ, ಕೆ.ವಿ. ವೀರಭದ್ರಯ್ಯ, ಡಿ. ಆದೆಪ್ಪ, ಡಿ. ತಾರಗಿರಿಯಪ್ಪ, ಸಿ. ಚಿಕ್ಕವೆಂಕಟಪ್ಪ, ಸಿ.ಕೆ.ಹುಚ್ಚಪ್ಪ, ಎನ್.ಪಿ. ಗುರಪ್ಪ, ಡಿ.ಸಿ. ಸುಬ್ಬರಾಯಪ್ಪ, ಡಿ.ಕಾವೇಟಪ್ಪ, ಯ|| ಮಹಡಿಮನೆ ಶಂಕರಪ್ಪ, ಕೆ.ಎನ್.ರಾಮಚಂದ್ರಯ್ಯ, ಕೆ.ವಿ. ನಂಜಪ್ಪ, ಸಪ್ಪೆ ವೈ. ನರಸಿಂಹಣ್ಣ, ಪಿ. ಸುಬ್ರಮಣ್ಯಶಾಸ್ತ್ರಿ, ಗಂಟೆ ದೊಡ್ಡಣ್ಣ, ಕೆ.ಆರ್. ಚೌಡಪ್ಪ ಮತ್ತು ಎಂ. ಹಂಪಯ್ಯ ಇವರು ಸಹಿ ಮಾಡಿರುತ್ತಾರೆ.

ಸಂಘದ ಮೂಲ ಧ್ಯೇಯಗಳು:-

ದೇವಾಂಗ ಮತಸ್ಥರು ವಿದ್ಯಾವಂತರಾಗಿ ಅಭಿವೃದ್ಧಿಗೆ ಬರುವುದು.ತಮ್ಮ ಕಸುಬನ್ನು ಉತ್ತಮ ರೀತಿಯಲ್ಲಿ ನಡೆಸಿ ಸಂಪದನಾಶಕ್ತಿ ಹೆಚ್ಚಿಸಿಕೊಂಡು ನೆಮ್ಮದಿಯಿಂದ ಬಾಳುವುದು.ಪೌರ ಮತ್ತು ರಾಜಕೀಯ ಕ್ಷೇತ್ರಗಳಲ್ಲೂ ಸರಕಾರಿ ಅಧಿಕಾರಿಗಳಲ್ಲೂ ಭಾಗವಹಿಸಿ ದೇಶಸೇವೆಯಲ್ಲಿ ನಿರತರಾಗುವುದು,ತಮ್ಮೊಳಗೆ ಪರಸ್ಪರ ಮೈತ್ರಿ ವೃದ್ಧಿ ಮಾಡಿ ಎಲ್ಲ ತೆರನ ಏಳಿಗೆಗೆ ಬರಲು ಸಾಧಕವಾದ ಎಲ್ಲ ಚಟುವಟಿಕೆಗಳಿಗೂ ಬೆಂಬಲ ಒತ್ತಾಸೆ ಕೊಡುಗೆ.

ಈ ಸಂಘ ನೊಂದಾವಣೆಯ 2 ವರ್ಷಗಳ ಮುನ್ನ ಜನಾಂಗದವರಿಂದ ವಸೂಲಾಗಿದ್ದ ಸುಮಾರು ರೂ.1502 ಸಂಘದ ಮೂಲಧನವಾಯಿತು.

ಸಂಘದ ಮೊಟ್ಟಮೊದಲ ಆಡಳಿತ ಮಂಡಳಿಯಲ್ಲಿ ಈ ಕೆಳಕಂಡ ಮಹನೀಯರಿದ್ದರು.

ಶ್ರೀಗಳಾದ ರಾವ್ ಸಾಹೇಬ್ ಶ್ರೀ ಎಂ. ಹಂಪಯ್ಯ, (ಅಧ್ಯಕ್ಷರು),
ಮರಡಿ ಸುಬ್ಬಯ್ಯ, ಹೊಸಮನೆ ಬನಪ್ಪ, ಡಿ. ಆದೆಪ್ಪ (ಉಪಾಧ್ಯಕ್ಷರುಗಳು), ಡಿ. ಎ. ಆದಿನಾರಾಯಣ (ಕಾರ್ಯದರ್ಶಿ), ಬಿ.ಆರ್. ರಾಮಲಿಂಗಯ್ಯ ಎಂ.ಎ.,ಬಿ.ಎಲ್.(ಜಂಟಿಕಾರ್ಯದರ್ಶಿ), ಸಿ. ಚಿಕ್ಕವೆಂಕಟಪ್ಪ (ಖಜಾಂಚಿ), ಕೆ.ಆರ್. ಚೌಡಪ್ಪ, ವೈ.ಎಸ್.ನರಸಿಂಹಣ್ಣ (ಲೆಕ್ಕಶೋಧಕರು),

ಆಡಳಿತ ಮಂಡಳಿ ಸದಸ್ಯರಾಗಿ, ಎಣ್ಣೆಗೆರೆ ಯಜಮಾನ್ ಚಿಕ್ಕವೆಂಕಟಪ್ಪ, ಡಿ.ಸಿ.ಸುಬ್ಬರಾಯಪ್ಪ, ಬಿ.ಎ., ಬಿ.ಎಲ್., ಯ|| ಮಹಡಿಮನೆ ಶಕರಪ್ಪ, ಬಿ.ಕಾವೇಟಪ್ಪ, ಸಿ.ಕೆ.ಹುಚ್ಚಪ್ಪ, ಯ|| ಅನ್ನದಾನಪ್ಪ, ನೀಲಪ್ಪನವರ ದಾಸಪ್ಪ, ವೈ.ಹೆಚ್.ವೆಂಕಟರಮಣಪ್ಪ, ಡಿ.ತಾರಿ ಗಿರಿಯಪ್ಪ, ಶ್ಯಾಂಪೂರ್ ಪಾಪಣ್ಣ, ಜಿ.ಶಾಮಣ್ಣ, ಹಂಟೆ ದೊಡ್ಡಣ್ಣ, ಕೆರಮಲ ಚಿಕ್ಕವೀರಭದ್ರಯ್ಯ, ಅಮ್ಮಿ ಚಿಕ್ಕ ತಿಮ್ಮಶೆಟ್ಟಪ್ಪ, ಎಂ.ಎಲ್.ರಂಗಪ್ಪ, ಪೌ||ಡಿ.ರಾಮಯ್ಯ, ಎಂ.ಟಿ.ರಂಗಯ್ಯ ಬಿನ್ ಅಣ್ಣಯ್ಯಪ್ಪ, ಊಡೇದ ಬನಪ್ಪ, ಬೇವಿನಮರದ ಮುದ್ದಪ್ಪ, ಶೀರ್ಯದ ಅಂಜನಪ್ಪ, ಡಾ|| ಡಿ.ಎಸ್. ಪುಟ್ಟಣ್ಣ, ಬಿ.ಎ., ಎಂ.ಬಿ.ಸಿ.ಎಂ., ಎಫ್.ಆರ್.ಸಿ.ಎಸ್, ಯಜಮಾನ್ ಚೀಣಾ ಅಂಗಡಿ ರಾಮಯ್ಯ, ಶೆಟ್ಟಿ ತಿಮ್ಮಯ್ಯ, ಶೆಟ್ಟಿ ಗವೇರಂಗಪ್ಪ, ವಾಜರಹಳ್ಳಿ ಚಿಕ್ಕಬನಪ್ಪ, ಬಿ. ಮುರುಡಪ್ಪ, ಚಿಕ್ಕಣ್ಣನವರ ತ್ಯಾರಮಲ್ಲಪ್ಪ, ದೊಮ್ಮಸಂದ್ರದ ಗಿರಿಯಪ್ಪ, ವಿ.ರಾಮಲಿಂಗಪ್ಪ, ಜಡೆ ಹನುಮಂತಪ್ಪ ಬಿನ್ ಅಣ್ಣಯ್ಯಪ್ಪ, ಅಮಾವಾಸೆಯ ಶ್ರೀಕಂಠಪ್ಪ, ಅಮಾವಾಸೆಯ ಭೋಗನಂಜುಂಡಪ್ಪ, ಹಣಬೆ ಶ್ರೀಕಂಠಪ್ಪ, ವೆಂಕಟಪ್ಪನವರ ಮಕ್ಕಳು ದಾಸಪ್ಪ, ಬಿ. ವೆಂಕಟರಮಣಪ್ಪ, ಶೆಟ್ಟರ ವೆಂಕಟರಮಣಪ್ಪ, ಸಿ.ಎಸ್.ತಮ್ಮಯ್ಯ, ಬಿ.ಕಾಳಪ್ಪ ಶೆಟ್ಟರು ಕಾಡು ಬಸವಯ್ಯ, ಬೇವಿನಮರದ ಲಿಂಗಪ್ಪ, ಚಿಕ್ಕವೆಂಕಟಪ್ಪ, ಬ್ಯಾಟಪ್ಪ. ಈ ಮಹನೀಯರ ತ್ಯಾಗ, ಧನಸಹಾಯ, ಮಾರ್ಗದರ್ಶನಗಳ ಫಲವಾಗಿ ಸಂಘ ಸನ್ಮಾರ್ಗದಲ್ಲಿ ಸುಸೂತ್ರವಾಗಿ ಮುನ್ನಡೆಯಿತು.

1943ರಲ್ಲಿ ಶೆಟ್ಟರು ಯಜಮಾನರಿಗೆ ಯಜಮಾನರಾದ ದೇವಾಂಗ ಜನಾಂಗದ ಪ್ರತಿಷ್ಠಿತ ವ್ಯಕ್ತಿಗಳಾದ ಶ್ರೀಯುತ ಎಣ್ಣೆಗೆರೆ ಯಜಮಾನ್ ಚಿಕ್ಕವೆಂಕಟಪ್ಪನವರ ಮಗ ಎಣ್ಣೆಗೆರೆ ಯಜಮಾನ್ ವೆಂಕಟಪ್ಪ (ಪತಿಯಪ್ಪ)ನವರು ಸಂಪಿಗೆ ಹಳ್ಳಿಯಲ್ಲಿರುವ ( ಈಗಿನ ಸಂಪಗಿರಾಮನಗರ) ತಮ್ಮ ಪಿತ್ರಾರ್ಜಿತ ಆಸ್ತಿಯಲ್ಲಿ 1 ಎಕರೆ 32 ಗುಂಟೆ ಜಮೀನನ್ನು ದೇವಾಂಗ ಸಂಘಕ್ಕೆ ದಾನವಾಗಿ ಬರೆದರು. ಅದರಲ್ಲಿ 1119 ಚದರಗಜ ಚಿಂತಾಮಣಿ ತಿಪ್ಪಯ್ಯನವರಿಗೆ ಅವರ ತಂದೆಯವರು ನೀಡಿದ್ದರು.

ಎಣ್ಣೆಗೆರೆ ಯಜಮಾನ್ ಪತಿಯಪ್ಪ ನವರು ಉಳಿದ ಜಾಗದಲ್ಲಿ ಸಮಾಜದವರು ದೇವಾಂಗ ಜನಾಂಗದ ವಿದ್ಯಾಭಿವೃದ್ಧಿಗಾಗಿ ಪರಸ್ಥಳದಿಂದ ಬರುವ ವಿಧ್ಯಾರ್ಥಿಗಳ ಉತ್ತೇಜನಕ್ಕಾಗಿ ದೇವಾಂಗ ಹಾಸ್ಟಲನ್ನು ಕಟ್ಟಿಸಿದರು.

ಇದಕ್ಕೆ ಮೊದಲು ಪರಸ್ಥಳದಿಂದ ಬಂದ ವಿದ್ಯಾರ್ಥಿಗಳಿಗೆ ಧರ್ಮ ಪ್ರಕಾಶ್ ಎನ್. ದಾಸಪ್ಪನವರ ಮನೆಯಲ್ಲಿ ಮರಡಿ ಸುಬ್ಬಯ್ಯನವರ ಮನೆಯಲ್ಲಿ, ಎಣ್ಣೆಗೆರೆ ಯಜಮಾನ್ ಚಿಕ್ಕವೆಂಕಟಪ್ಪ (ಪತಿಯಪ್ಪ)ನವರುಗಳ ಮನೆಯಲ್ಲಿ ಹೊಸಮನೆ ಕೆಂಚಪ್ಪನವರ ಮನೆಯಲ್ಲಿ, ಆಂಧ್ರ ದೇವಂಗ ಜನಾಂಗದ ಹಲವಾರು ಹಿರಿಯರ ಮನೆಗಳಲ್ಲಿ ಊಟ ವಸತಿ ಸೌಕರ್ಯ ಕಲ್ಪಿಸಿದ್ದು ಶಿಕ್ಷಣ ಸೇವೆಯನ್ನು ಮಾಡುತ್ತಿದ್ದರು. ಅವರುಗಳ ಪ್ರಯತ್ನದ ಫಲವಾಗಿ ದೇವಾಂಗ ಹಾಸ್ಟಲ್ ಕಟ್ಟಡವನ್ನು ಕಟ್ಟಿ ಪರಸ್ಥಳದಿಂದ ಬರುವ ನೂರಾರು ಜನ ವಿದ್ಯಾರ್ಥಿಗಳಿಗೆ ಆಶ್ರಯ ನೀಡುತ್ತಿದ್ದರು.
ನಂತರ ದಿನಗಳಲ್ಲಿ ವಾರ ಅನ್ನ
ಅಂದರೆ ಒಂದು ವಾರ ಒಬ್ಬರ ಮನೆಯಲ್ಲಿ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಮಾಡುವುದು ಈರೀತಿ ಅನೇಕ ಕುಟುಂಬಗಳು ಹೊರಗಡೆಯಿಂದ ಬಂದ ವಿದ್ಯಾರ್ಥಿ ಗಳಿಗೆ ಸಹಕಾರಿಯಾಗಿದ್ದರು.

1930ರಲ್ಲಿ ಆಂಧ್ರ ದೇವಾಂಗ ಸಂಘವು ಸ್ಥಾಪನೆಯಾಗಿ ಸಮಾಜಕ್ಕೆ ಇನ್ನು ಹೆಚ್ಚಿನ ಸೇವೆಯನ್ನು ಕೊಡಲು ಪ್ರಾರಂಭಿಸಿತು.

ದೇವಾಂಗ ಜನಾಂಗವು ಮದುವೆ ಶುಭ ಸಮಾರಂಭಗಳಿಗಾಗಿ ದೇವಾಂಗ ಸಂಘ 25 ವರ್ಷದ ಜ್ಞಾಪಕಾರ್ಥವಾಗಿ ಕಲ್ಯಾಣ ಮಂಟಪವನ್ನು ಕಟ್ಟಿಸಿ ದೇವಾಂಗ ಸಂಘ ರಜತ ಮಹೋತ್ಸವ ಭವನ ಎಂದು ಹೆಸರು ಇಡಲಾಯಿತು.

50ನೇ ವರ್ಷದ ಜ್ಞಾಪಕಾರ್ಥವಾಗಿ ನೂತನ ವಿದ್ಯಾರ್ಥಿ ಭವನವನ್ನು ಕಟ್ಟಿಸಲಾಯಿತು.

60ನೇ ವರ್ಷದ ಜ್ಞಾಪಕಾರ್ಥವಾಗಿ ಪತಿಯಪ್ಪ ಭವನ ಕಟ್ಟಲಾಯಿತು.

75ನೇ ವರ್ಷದ ಜ್ಞಾಪಕಾರ್ಥವಾಗಿ ದೇವಾಂಗ ಸಂಘ ಅಮೃತ ಮಹೋತ್ಸವ ಭವನ ಶಾಲಾ ಕಟ್ಟಡವನ್ನು ಕಟ್ಟಲಾಯಿತು.

ದೇವಾಂಗ ಸಂಘವು ಸಾರ್ವಜನಿಕರಿಗೆ ಶಿಕ್ಷಣ ನೀಡುವ ಸಲುವಾಗಿ 1980ರಲ್ಲಿ ನರ್ಸರಿ, ಪ್ರಾಥಮಿಕ, ಪ್ರೌಢ ಶಾಲೆಗಳನ್ನು ನಡೆಸಿಕೊಂಡು ಬರುತ್ತಿದೆ.

2001ರಲ್ಲಿ ಪದವಿ ಪೂರ್ವ ನಂತರ ಪ್ರಥಮ ದರ್ಜೆ ಕಾಲೇಜು ಪ್ರಾರಂಭಿಸಿ ಸಾವಿರಾರು ಜನ ವಿದ್ಯಾರ್ಥಿಗಳಿಗೆ ಸುಲಭ ದರದಲ್ಲಿ ಶಿಕ್ಷಣ ನೀಡಲಾಗುತ್ತಿದೆ.

ದೇವಾಂಗ ಜನಾಂಗದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿವರ್ಷ ಲಕ್ಷಾಂತರ ರೂಪಾಯಿ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದೆ.

ದೇವಾಂಗ ಸಂಘದ ಬೆಳವಣಿಗೆಗೆ ಪೂರ್ವಜರು ನೀಡಿರುವ ಕೊಡುಗೆಗಳು ಅಪಾರವಾದ ಬೆಲೆಯುಳ್ಳದ್ದಾಗಿದೆ.
1939ರಲ್ಲಿ ಕೆಂಪೇಗೌಡ ರಸ್ತೆಯ ಹೊಸ ಜೈಲು ಬಡಾವಣೆ ಅಂದರೆ ಅಂದಿನ ಜೈಲ್ ಎಕ್ಸಟೆನ್‌ಶನ್ ರಲ್ಲಿ 1903ರಲ್ಲಿ ಖರೀದಿ ಮಾಡಲು ಶಾಂಪುರದ ಪಾಪಣ್ಣನವರು, ಎಣ್ಣೆಗೆರೆ ಯಜಮಾನ್ ಚಿಕ್ಕವೆಂಕಟಪ್ಪ (ಪತಿಯಪ್ಪ) ,ಕೆಂಚಪ್ಪ, ಮರಡಿಸುಬ್ಬಯ್ಯ ಹಾಗೂ ಇತರರು ದೇಣಿಗೆಯಿಂದ ಆ ಜಾಗವನ್ನು 6000-00 ರೂಗಳಿಗೆ ಸೈಟು ಕೊಂಡರು. 75 ವರ್ಷಗಳ ಆಸ್ತಿಯನ್ನು ಉಳಿಸಿಕೊಂಡು ಬರುವುದು ಒಂದು ಸಾಹಸವೇ ಸರಿ ಏಕೆಂದರೆ ನಂತರ ದಿನಗಳಲ್ಲಿ ಬಾಡಿಗೆಗೆ ನೀಡಿದ ಜಾಗವನ್ನು 25 ವರ್ಷಗಳ ಕಾಲ ಬಾಡಿಗೆದಾರರನ್ನು ಬಿಡಿಸಿ ಸಮಸ್ಯೆ ಬಗೆಹರಿಸಲು 25 ವರ್ಷಗಳ ಕಾಲ ಕೋರ್ಟಿನ ಕಛೇರಿಗಳನ್ನು ಅಳೆದು ಸುತ್ತಿ ಬಾಡಿಗೆದಾರರನು ಶ್ರಮ ಅಪಾರವಾಗಿದೆ ಇದಕ್ಕಾಗಿ ಹೋರಡಿದ ಕೀರ್ತಿ ಯಾರು ಏನೂ ಹೇಳಿದ್ದರು ಅಂದಿನ ಗೌರವ ಕಾರ್ಯದರ್ಶಿ ಅವರ ಶ್ರಮವಾಗಿದೆ.

ಈಗಿರುವ ಆಡಳಿತ ಮಂಡಳಿಯು ಅಂದಿನ ಮುಂದಾಲೋಚನೆ ಆಡಳಿತ ಮಂಡಳಿಯ ಪ್ರಯತ್ನದ ಶ್ರಮ ದೇವಾಂಗ ಸಂಘದ ಮಹಾಪೋಷಕರ ಕೊಡುಗೆ ಆಗು ಇಂದಿನ ಆಡಳಿತ ಮಂಡಳಿಯ ಶ್ರಮ ದೇವಾಂಗ ಟವರ್ ಕಟ್ಟುವ ಕನಸು ನನಸು ಕಂಡಿದೆ.
ದೇವಾಂಗ ಸಂಘದ ಆಧಾರವಾಗಿ ಬಂದು ಕೇವಲ ನಾಲ್ಕು ಐದು ದಿನಗಳಲ್ಲಿ 45 ಲಕ್ಷ ರೂಗಳನ್ನು ಅವಶ್ಯಕತೆ ಇರುವ ಸಂದರ್ಭದಲ್ಲಿ ಅಂದರೆ ಬೆಂಗಳೂರು ಮಹಾನಗರ ಪಾಲಿಕೆ ನೀಲಿ ನಕ್ಷೆಯನ್ನು ತರಲು ಸಹಕಾರಿಯಾದ್ದರು. ಇದೆ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳಬೇಕಾದು ನಮ್ಮ ಹೆಮ್ಮೆಯ ಐ.ಎ.ಎಸ್. ಅಧಿಕಾರಿಗಳು ಆದ ಶ್ರೀಯುತ ಕೆ.ಆರ್. ಶ್ರೀನಿವಾಸ್ ರವರನ್ನು ದೇವಾಂಗ ಟವರ್ ನೀಲಿ ನಕ್ಷೆಯನ್ನು ಕೋಡಿಸುವಲ್ಲಿ ಅವರ ಕೊಡುಗೆ ಅಪಾರ ಅವರ ಸಹ ಸ್ಮರಣೆ ಮಾಡಲೇಬೇಕು. 
ಮಹಾಪೋಷಕರುಗಳು ದೇವಾಂಗ ಟವರ್ ಕಟ್ಟಡ ಕಟ್ಟಲು ಮಹಾಪೋಷಕರ ಹಿತೈಷಿಗಳ ಸಭೆಯಲ್ಲಿ ಸುಮಾರು 9 ಕೋಟಿಗೂ ಹೆಚ್ಚು ಹಣವನ್ನು ಸಾಲವಾಗಿ ನೀಡಲು ವಾಗ್ದಾನ ವಾಗಿತ್ತು ಈರೀತಿಯಲ್ಲಿ ದಾನ ಧರ್ಮ ,ಧಾರ್ಮಿಕ, ಸಂಸ್ಕೃತಿಕ, ಶೈಕ್ಷಣಿಕ, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಮತ್ತು ಇತರ ಅಭಿವೃದ್ಧಿ ಕಾರ್ಯಗಳಲ್ಲಿ ಸಂಘವನ್ನು ಮುನ್ನಡೆಗೆ ಕಾರಣರಾಗಿದ್ದಾರೆ.

ದೇವಾಂಗ ಬ್ಯಾಂಕ್ ಸ್ಥಾಪಿಸಲಾಯಿತು.ವಿಜಯ ಬ್ಯಾಂಕ್ ವಿಲೀನವಾದ ಮೇಲೆ ಟೆಕ್ಸ್ ಟೈಲ್ ಕೋ-ಆಪರೇಟೀವ್ ಬ್ಯಾಂಕನ್ನು 1963 ರಲ್ಲಿ ನೇಕಾರರಿಗಾಗಿ ಜುಮ್ಮಾ ಮಸೀದಿ ರಸ್ತೆ, ದೇವಾಂಗ ಮಾರ್ಕೆಟ್ ಕಟ್ಟಡದಲ್ಲಿ ಸ್ಥಾಪಿಸಲಾಯಿತು. ದೇವಾಂಗ ಸಂಘವು ಈ ಎಲ್ಲಾ ಆದಾಯ ವೆಚ್ಚಗಳಿಗೆ ಕ್ರಮಬದ್ಧವಾಗಿ ಲೆಕ್ಕಪತ್ರಗಳನ್ನು ಇಟ್ಟು ಸರ್ವಸದಸ್ಯರ ಸಭೆಗಳನ್ನು ನಡೆಸಿಕೊಂಡು ಸದಸ್ಯರ ಮನ್ನಣೆಗೆ ಪಾತ್ರವಾಗಿದೆ.

ದೇವಾಂಗ ಸಂಘವು 1972ರಲ್ಲಿ ಅಖಿಲ ಕರ್ನಾಟಕ ಪ್ರಥಮ ಸಮ್ಮೇಳನ ಯಶಸ್ವಿಯಾಗಿ ನಡೆಸಿ ಹಂಪಿ ಹೇಮಕೂಟ ಶ್ರೀ ಗಾಯತ್ರಿ ಪೀಠ ಪುನರ್ಜ್ಜೀವನಕ್ಕೆ ಶ್ರಮಿಸಲು ದೃಢ ಸಂಕಲ್ಪ ಮಾಡಿದ್ದು ಉತ್ತರ ಕರ್ನಾಟಕ ದಾನ ವೀರ ಶ್ರೀಮಂತ ವೆಂಕಪ್ಪನವರು, ವಾಸಪ್ಪಸಕ್ರಿರವರು, ಅಖಿಲ ಭಾರತ ದೇವಾಂಗ ಸಮಾಜದ ಅಧ್ಯಕ್ಷರು ಎಫ್. ಎಂ. ಭಾರದ್ವಾಡ್ ರವರು, ಗದಗ್ ಬೆಟ್ಟಗೆರಿಯ ನಾರಾಯಣಪ್ಪ ಅರಳಿಕಟ್ಟಿರವರು, ಬೆಳಗಾಂನ ಹಿರಿಯರೆಲ್ಲರನ್ನು ಒಗ್ಗೂಡಿಸಿ ಶ್ರಮಪಟ್ಟು 1980ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಅಖಿಲ ಕರ್ನಾಟಕ ಎರಡನೇ ಸಮ್ಮೇಳನದಲ್ಲಿ ದೇವಾಂಗ ಸಂಘದ ಅಧ್ಯಕ್ಷರಾಗಿದ್ದು ಧರ್ಮಪ್ರಕಾಶ್, ಎನ್. ದಾಸಪ್ಪನವರ ಸುಪುತ್ರರಾದ ಡಿ ಹನುಮಂತಪ್ಪನವರು, ಸಮಾಜ ಸೇವಾ ಧುರೀಣ ವೈ.ಎಚ್. ವೆಂಕಟರಮಣಪ್ಪನವರ ಸುಪುತ್ರ ವೈ.ವಿ. ತಿಮ್ಮಯ್ಯನವರು, ದೇವಾಂಗ ಭೂಷಣ ಶ್ರೀ ಬಿ.ಜಿ.ವೀರಣ್ಣ , ಎಣ್ಣೆಗೆರೆ ವೈ.ವಿ.ಶ್ರೀನಿವಾಸಮೂರ್ತಿ ಹಾಗೂ ಮಹಾನಿಯರುಗಳ ಪ್ರಯತ್ನದ ಫಲವಾಗಿ ಶ್ರೀ ಗಾಯತ್ರಿ ಪೀಠ ಮಹಾಸಂಸ್ಥಾನದ ಆಸ್ತಿಯು ಸಮಾಜದವರ ಕೈಗೆ ಬಂದಿತು. ಇದಕ್ಕಾಗಿ ಒಂದು ಟ್ರಸ್ಟನ್ನು ಸ್ಥಾಪಿಸಿ ಅದಕ್ಕೆ ವರ್ಗಾಯಿಸಲಾಯಿತು. ಬೆಂಗಳೂರು ನಗರದ ಕೆಂಚೀನಹಳ್ಳಿ ರಾಜರಾಜೇಶ್ವರಿ ಪೀಠ ಮಹಾ ಸಂಸ್ಥಾನಾಧೀಶ್ವರ ಶ್ರೀ ಶ್ರೀ ಶ್ರೀ ತಿರುಚಿ ಮಹಾಸ್ವಾಮಿಗಳ ಆಶೀರ್ವಾದದಲ್ಲಿ ತಯಾರಾದ ಶ್ರೀ ಶ್ರೀ ಶ್ರೀ ದಯಾನಂದಪುರಿ ಮಹಾ ಸ್ವಾಮೀಜಿಯವರನ್ನು ದೇವಾಂಗ ಸಮಾಜದ ಪ್ರಯತ್ನದ ಫಲವಾಗಿ 1990ರಲ್ಲಿ ಪೀಥಾಧಿಪತಿಗಳಾಗಿ ಸರ್ವ ಸಮ್ಮತವಾಗಿ ಹಂಪಿಯಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ರಾಜಗೋಪಾಲ ಚೆಟ್ಟಿಯಾರ್ ಮತ್ತು ಜನಾಂಗದವರ ಸಹಕಾರದಿಂದ ಪಟ್ಟಾಭಿಷೇಕ ಮಾಡಲಾಯಿತು.

ಅಖಿಲ ಭಾರತ ದೇವಾಂಗ ಮಹಾ ಸಮ್ಮೇಳನ ದೇವಾಂಗ ಸಂಘದ ನೇತೃತ್ವದಲ್ಲಿ ಶ್ರೀ ಶ್ರೀ ಶ್ರೀ ದಯಾನಂದಪುರಿ ಮಹಾ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಬೆಂಗಳೂರು ಮಹಾನಗರದ ಅರಮನೆ ಮೈದಾನದಲ್ಲಿ 3 ದಿನಗಳ ಕಾಲ ವಿಜೃಂಭಣೆಯಿಂದ ನೆರವೇರಿಸಲಾಯಿತು.

ಸ್ಥಿರ ಆಸ್ತಿಗಳು:-

ಅ) ಎಣ್ಣೆಗೆರೆ ಯಜಮಾನ್ ವೆಂಕಟಪ್ಪನವರ ಮಗ ಎಣ್ಣೆಗೆರೆ ಯಜಮಾನ್ ಚಿಕ್ಕವೆಂಕಟಪ್(ಪತಿಯಪ್ಪ ) ನೀಡಿದ ಜಮೀನು 
ಆ) ಗವಿಪುರದ ಹತ್ತು ಮಂದಿ ಛತ್ರ 
ಇ) ದೇವಾಂಗ ಮಾರ್ಕೆಟ್ 
ಈ) ಕೆಂಪೇಗೌಡ ರಸ್ತೆಯಲ್ಲಿರುವ ಸೈಟು

ಹಿಂದಿನದಿಂದ ಈಗಿರುವ 
ದೇವಾಂಗ ಸಂಘದ ಪದಾಧಿಕಾರಿ ವರ್ಗ:-

ಅಧ್ಯಕ್ಷರುಗಳು

ರಾವ್ ಸಾಹೇಬ್ ಎಂ. ಹಂಪಯ್ಯ1923-1931
ಬಿ.ಜಿ.ವೀರಣ್ಣ1979-1984
ಎಂ.ಚನ್ನಬಸಪ್ಪ1933-1938
ಪ್ರೊ|| ಕೆ.ಜಿ. ಭಾಸ್ಕರ್1985-1991
ಡಿ.ಸಿ. ಸುಬ್ಬರಾಯಪ್ಪ1939-1952
ವೈ.ವಿ.ವೆಂಕಟರಂಗಪ್ಪ (ವೈ.ಹೆಚ್.ರಂಗಣ್ಣ)1991-1995
ವೈ.ಹೆಚ್. ವೆಂಕಟರಂಗಪ್ಪ 1953-1964
ಬಿ.ಜಿ. ರಂಗರಾಜು 1995-2001
ಡಿ. ಅರಸಪ್ಪ1965-1966
ವೈ.ವಿ. ವೆಂಕಟಪ್ಪ2001-2008
ಕೆ.ಎಂ. ನಾಗಣ್ಣ1967-1975
ವಿ.ಪಿ. ರಾಮಯ್ಯ (ವಿ.ಪಿ.ಆರ್.)2008-2010
ಡಿ. ಹನುಮಂತಪ್ಪ1976-1979
ಸ. ಸೂರ್ಯನಾರಾಯಣ್ 2010 ರಿಂದ

ಉಪಾಧ್ಯಕ್ಷರುಗಳು

ಮರಡಿ ಸುಬ್ಬಯ್ಯ 1924-1932
ಶೀರ್ಯಾದ ಆಂಜನಪ್ಪ1954-1959
ಡಿ. ಆದೆಪ್ಪ1924-1932
ಸಿ. ಹೊನ್ನಪ್ಪಭಾಗವತರು 1967 ರಿಂದ ಹೊಸಮನೆ ಕೆಂಚಪ್ಪ1924-1932
ಚಿಕ್ಕವೆಂಕಟಪ್ಪ1968-1972
ಡಾ|| ಡಿ.ಎಸ್.ಪುಟ್ಟಣ್ಣ1933- 1938 ವೈ ಹೆಚ್ . ವೈ.ವಿ. ತಿಮ್ಮಯ್ಯ 1973-1979
ಬಿ. ಕಾವೇಟಪ್ಪ 1933-1938
ಟಿ. ಮೂಡಲಯ್ಯ1976-1979
ಧರ್ಮಪ್ರಕಾಶ ಎನ್.ದಾಸಪ್ಪ1933-1954
ವೈ.ವಿ.ವೆಂಕಟರಂಗಪ್ಪ ( ವೈ.ಹೆಚ್ . ರಂಗಣ್ಣ )1979-1988
ಕೆ.ಆರ್. ಚೌಡಪ್ಪ1939-1952
ಹೊನ್ನಪ್ಪಭಾಗವತರು
1979-1981
ಸಿ. ಚಿಕ್ಕವೆಂಕಟಪ್ಪ 1937-1964
ಜಿ.ಸಿ. ಲೋಕೇಶ್1981-1984
ಶ್ಯಾಂಪೂರ್ ಪಾಪಣ್ಣ1944-1964
ಬಿ.ಜಿ. ರಂಗರಾಜು1985-1995 ಜನಸೇವಾನಿರತ ಎಣ್ಣೆಗೆರೆ ಯಜಮಾನ್ ಆರ್. ವೆಂಕಟರಾಮಯ್ಯ 1953-1967

ಪ್ರೊ|| ಹೆಚ್. ವೆಂಕಟಾಚಲಮೂರ್ತಿ 1988-1991
ಡಿ. ಅರಸಪ್ಪ1954-1964
ಬಿ.ಎಂ.ರಂಗದಾಸಪ್ಪ1991-2008
ಎಲ್. ಶ್ರೀಕಂಠಯ್ಯ1965-1966
ವಿ.ಪಿ.ರಾಮಯ್ಯ(ವಿ.ಪಿ.ಆರ್.)1995-2008
ಸಿ. ಚಿಕ್ಕವೆಂಕಟಪ್ಪ1968-1972
ಮಾಧವ 2008 ರಿಂದಸಿ.ಎಲ್.ಪುಟ್ಟಸ್ವಾಮಯ್ಯ2008 ರಿಂದ
ಎ.ವಿಜಯಕುಮಾರ್ (ಬಾಬು) 2013

ಗೌರವ ಕಾರ್ಯದರ್ಶಿಗಳು:

ಡಿ.ಎ. ಆದಿನಾರಾಯಣ 1924-1932
ಬಿ.ಜಿ. ವೀರಣ್ಣ1967-1974
ಸಿ. ಚಿಕ್ಕವೆಂಕಟಪ್ಪ1933-1938
ಜಿ.ಸಿ. ಲೋಕೇಶ್1975-1975
ಎಸ್. ಗುರುಮೂರ್ತಿ1937-1956
ಬಿ.ಎಸ್.ಪುಟ್ಟಣ್ಣಶೆಟ್ಟರು 1976-1979
ಸಿ.ನರಸಿಂಹಯ್ಯ 1954-1956
ಪ್ರೊ|| ಕೆ.ಜಿ.ಭಾಸ್ಕರ್1979-1984
ಬಿ.ಜಿ.ವೀರಣ್ಣ1957-1964
ಎಣ್ಣೆಗೆರೆ ವೈ.ವಿ.ಶ್ರೀನಿವಾಸಮೂರ್ತಿ 1985-2010
ವಿ. ಗೋವಿಂದಪ್ಪ1965-1966
ಟಿ.ಭಾಸ್ಕರ್ (ಟಿ.ಟಿ.)2010 ರಿಂದ

ಸಹ ಕಾರ್ಯದರ್ಶಿಗಳು:

ಬಿ.ಆರ್. ರಾಮಲಿಂಗಯ್ಯ 1924-1932
ಟಿ. ಮೂಡಲಯ್ಯ1967-1968
ಎಸ್. ಗುರುಮೂರ್ತಿ 1957-1964
ಎಣ್ಣೆಗೆರೆ ವೈ.ವಿ.ದಾಸಪ್ಪ 1965-1966
ಬಿ.ಕೆ. ಚಂದ್ರಶೇಖರಯ್ಯ 1933-193
ಜೆ.ಸಿ. ಲೋಕೇಶ್
1968-1975.
ಜನಸೇವಾನಿರತ ಎಣ್ಣೆಗೆರೆ ಯಜಮಾನ್ ಆರ್.ವೆಂಟರಾಮಯ್ಯ - 1939-1942
ಬಿ.ಎಂ.ರಂಗದಾಸಪ್ಪ1975-1978
ಡಿ.ಆರ್.ಶಿವಪ್ಪ1944
ಚಿಂದಿ ಕೆ. ತಮ್ಮಯ್ಯ1976-1979
ಟಿ.ರಂಗದಾಸಪ್ಪ1945-1946
ಬಿ.ಜಿ. ರಂಗರಾಜು 1979-1981
ಡಿ. ಹನುಮಂತಪ್ಪ 1947-1952
ಟಿ. ನಾಗರಾಜು1981-2008
ಸಿ. ನರಸಿಂಹಯ್ಯ1953-1954
ಎ.ಕೆ. ಕೆಂಚಪ್ಪ2008-2010
ಕೆ.ಪಿ. ರೇವಣ್ಣ (ಕೆ.ಆರ್.ಪಿ.)2010 ರಿಂದ

ಕೋಶಾಧಿಕಾರಿಗಳು:

ಸಿ. ಚಿಕ್ಕವೆಂಕಟಪ್ಪ1924-1932

ಕೆ.ಆರ್. ಚೌಡಪ್ಪ1933-1943

ಜನಸೇವಾನಿರತ ಎಣ್ಣೆಗೆರೆ ಯಜಮಾನ್ ಆರ್. ವೆಂಕಟರಾಮಯ್ಯ 1943-1952

ಬಿ.ಜಿ. ವೀರಣ್ಣ1953-1956

ಸಿ. ನರಸಿಂಹಯ್ಯ1957-1964

ಆರ್. ವೇಣುಗೋಪಾಲ್1965-1966

ಸಿ. ನರಸಿಂಹಯ್ಯ-1967-1974.

ಎಣ್ಣೆಗೆರೆ ವೈ. ವಿ. ಶ್ರೀನಿವಾಸಮೂರ್ತಿ - 1975-1976

ಟಿ. ವಸಂತಯ್ಯ - 1976-2008

ಎಣ್ಣೆಗೆರೆ ಆರ್. ವೆಂಕಟರಾಮಯ್ಯ(ವೈ.ವಿ.ರಾಜು)
2008 ರಿಂದ 2013

ಎನ್. ದೇವರಾಜ್ ( ದೇವ್ ಆರ್ಟ್ಸ್) - 2013 ರಿಂದ

ಸಮ್ಮೇಳನಗಳು

ಅಖಿಲ ಭಾರತ ದೇವಾಂಗ ಮಹಾ ಸಮ್ಮೇಳನ - 1998

ಅಖಿಲ ಕರ್ನಾಟಕ ದೇವಾಂಗ ಪ್ರಥಮ ಮಹಾ ಸಮ್ಮೇಳನ - 1972

ಅಖಿಲ ಕರ್ನಾಟಕ ದೇವಾಂಗ ದ್ವಿತೀಯ ಸಮ್ಮೇಳನ ಹುಬ್ಬಳ್ಳಿ - 1980

ಅಖಿಲ ಕರ್ನಾಟಕ ದೇವಾಂಗ ತೃತೀಯ ಸಮ್ಮೇಳನ ಮೈಸೂರು - 1982

 

 

ನಿಮ್ಮ ಮಾಹಿತಿಗಾಗಿ ನಿಮ್ಮವ,

ಎಣ್ಣೆಗೆರೆ ಆರ್. ವೆಂಕಟರಾಮಯ್ಯ
ವೈ.ವಿ.ರಾಜು.
ಮಹಾಪೋಷಕರು
ಮಾಜಿ ಕೋಶಧಿಕಾರಿಗಳು
ದೇವಾಂಗ ಸಂಘ.

Categories: 
Share Share
Scroll to Top