88929 25504
 
  • Total Visitors: 3750688
  • Unique Visitors: 309648
  • Registered Users: 35961

Error message

  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).
  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).
  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).
  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).
  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).
  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).
  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).
  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).
  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).
  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).
  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).
  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).
  • Deprecated function: implode(): Passing glue string after array is deprecated. Swap the parameters in drupal_get_feeds() (line 394 of /home4/devan1ay/public_html/includes/common.inc).

ನೇಕಾರ ಸಮಾಜ

 

 

ನೇಕಾರ ಸಮಾಜ, ಸಂಸ್ಕೃತಿ ಆರ್ಥಿಕ ಸ್ಥಿತಿಗತಿ : ೮. ನೇಕಾರರಲ್ಲಿ ಒಳ ಪಂಗಡಗಳು

 

ಗ್ರಾಮೀಣ ಬದುಕಿನಲ್ಲಿ ಪರಂಪರಾನುಗತವಾಗಿ ಕೈಗೊಂಡು ಬರುವಂತಹ ವೃತ್ತಿಗಳನ್ನು ಗ್ರಾಮೀಣ ವೃತ್ತಿಗಳು, ಕೈಕಸುಬುಗಳು. ಒಂದೇ ಸಮುದಾಯದವರು ಮಾಡುವುದರಿಂದ ಕುಲ ಕಸಬುಗಳು ಎನ್ನಬಹುದು. ಈ ವೃತ್ತಿಗಳಲ್ಲಿ ಶ್ರಮವೇ ಮುಖ್ಯವಾದದ್ದು.

ಕೈಗಾರಿಕಾ ಕ್ರಾಂತಿ ಮೊದಲ ಈ ಗ್ರಾಮೀಣ ಕಸಬುಗಳು ಸಮಾಜದಲ್ಲಿ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದವು. ಕೈಗಾರಿಕಾ ಕ್ರಾಂತಿನಂತರಅನೇಕ ಸಾಂಸ್ಕೃತಿಕ, ಸಾಮಾಜಿಕ ಬದಲಾವಣೆಗಳಾದವು, ವೃತ್ತಿ ಜೀವನ ಸ್ವರೂಪ ಜೀವನದ ಸಂಪೂರ್ಣ ಬದಲಾಯಿತು. ಇಂತಹ ಕೈ ಕಸಬಹು, ಕುಲ ಕಸಬುಗಳಲ್ಲಿ ನೇಕಾರಿಕೆಯು ಒಂದು.

ನೇಕಾರಿಕೆ ಶ್ರಮ ಬಯಸುವ ವೃತ್ತಿ. ಮಗ್ಗದ ಮೇಲೆ ಕುಳಿತ ವ್ಯಕ್ತಿ ಏಕ ಕಾಲಕ್ಕೆ ಕಣ್ಣು- ಕಾಲು-ಕೈಗಳನ್ನು ಉಪಯೋಗಿಸಬೇಕಾಗುತ್ತದೆ. ಕಣ್ಣು ಮಗ್ಗದ ಹಾಸು-ಹೊಕ್ಕುಗಳು ಸರಿಯಾದ ರೀತಿಯಲ್ಲಿ ಸೇರ್ಪಡೆಯಾಗುತ್ತದೆಯೋ, ಇಲ್ಲವೋ, ಹಾಸಿನ ಅಥವಾ ಹೊಕ್ಕಿನ ಎಳೆಗಳು ತುಂಟಾಗಿಯೋ ಎಂಬುದನ್ನು ಗಮನಹರಿಸುತ್ತದೆ. ಕಾಲುಗಳು ಅಣಿಯನ್ನು ಮೇಲೆ-ಕೆಳಗೆ ಮಾಡಲು, ಕೆಳಗಿನ ಮಣೆಯನ್ನು ತುಳಿಯುತ್ತಿರುತ್ತದೆ. ಕೈಗಳು ಪ್ರತಿ ಅಡ್ಡ ಎಳೆಯ ನಂತರ ಒತ್ತಾಗಿ ಕೊಡುವಂತೆ ಬಡೆಯುವುದಲ್ಲದೇ ಲಾಳಿ ಅತ್ತಿದಿಂತ ಓಡಾಡಲು ಇರುವ ಹಗ್ಗವನ್ನು ಜಗ್ಗುತ್ತಿರುತ್ತದೆ. ಹೀಗೆ ನೇಕಾರಿಕೆಯ ವೃತ್ತಿ ದೈಹಿಕ ಶ್ರಮದ ಜೊತೆಗೆ ತಾಳ್ಮೆಯನ್ನು ನೀರಕ್ಷಿಸುವಂತಹ ವೃತ್ತಿ. ೮ ವರ್ಷದ ಮಕ್ಕಳಿಂದ ಹಿಡಿದು ೮೦ ವರ್ಷದ ವೃದ್ಧರ ವರೆಗೆ ನೇಕಾರಿಕೆ ವೃತ್ತಿಗೆ ಸಹಾಯ ಬೇಕಾಗುತ್ತದೆ. ಕಾರಣ ಒಂದು ಗಾದೆ ಮಾತು ಪ್ರಚಲಿತದಲ್ಲಿದೇ. ‘‘ದೇವಾಂಗರ ಮನೆಯಲ್ಲಿ ದೆವ್ವಗಳಿಗೂ ಕೆಲಸ ಉಂಟು’’.

ಮಾನವನ ಇತಿಹಾಸದೊಂದಿಗೆ ಆತನ ಜೀವನಾವಶ್ಯಕವಾದ ವಸ್ತುಗಳ ಇತಿಹಾಸವು ಪ್ರಾರಂಭವಾಗುವುದು. ಮಾನವ ಜೀವನಕ್ಕೆ ಅತ್ಯವಶ್ಯಕವಾದ ಬೇಡಿಕೆಗಳೆಂದರೆ ಆಹಾರ, ಅಚ್ಚಾದನ (ಬಟ್ಟೆ, ಅರಿವೆ, ವಸ್ತ್ರ, ವಸನ) ಆಶ್ರಯ. ವಸನ ವಿಕಾಸವು ಎಂದಿನಿಂದ ಪ್ರಾರಂಭವಾಯಿತ್ತೆಂಬುದನ್ನು ನಿರ್ದಿಷ್ಟವಾಗಿ ಹೇಳಲು ಆಧಾರಗಳಿಲ್ಲ. ತೀರಾ ಪ್ರಾಚೀನ ಕಾಲದಲ್ಲಿ ದಿಂಗಬರನಾಗಿ ತಿರುಗುತ್ತಿದ್ದ ಮಾನವನಿಗೆ ಅರಿವು ಬಂದಾಗ ಅರಿವೇ ಬೇಕಾಯಿತು. ಅರಿವು ಬಂದಾಗ ಪ್ರಾಣಿಯ ಚರ್ಮ, ಗಿಡದ ತೊಗಟೆ ಇತ್ಯಾದಿಗಳಿಂದ ತನ್ನ ಮಾನವನ್ನು, ದೇಹವನ್ನು ರಕ್ಷಿಸಿಕೊಳ್ಳಲು ಪ್ರಾರಂಭಿಸಿದ ಕ್ರಿ.ಪೂ.೨೦೦೫ ರಿಂದ ೩೦೦೦ ವರೆಗಿನ ಸಿಂಧೂ ಸಂಸ್ಕೃತಿಯ ಜನರು ನೂಲುವ, ನೇಯುವ, ಹೊಲೆಯುವ ಕಲೆಯನ್ನು ಬಲ್ಲವರಾಗಿದ್ದರು. ಈ ಸಂಗತಿಯು ಆ ನಿವೇಶನಗಳಲ್ಲಿ ದೊರೆತ ಕದೀರುಗಳಿಂದ, ಕಂಚಿನ ಸೂಜಿಗಳಿಂದ ಗೊತ್ತಾಗುತ್ತದೆ. ಗ್ರೀಕ್ ಇತಿಹಾಸಕಾರ ಹೇರೊಡೋಟಸನ್ ಭಾರತೀಯ ಯೋಧರು ಯುದ್ಧಕಾಲದಲ್ಲಿ ಅರಳೆ ಬಟ್ಟೆ ಧರಿಸುತ್ತಿದ್ದನ್ನು ಹೇಳುತ್ತಾನೆ. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ನೇಗಿ ಉದ್ಯಮದ ಬಗ್ಗೆ ಪ್ರಸ್ತಾಪವಿದೆ. ಮೇಗಸ್ಥನಿಸ್ಥನು ಭಾರತೀಯರು ಧರಿಸುತ್ತಿದ್ದ ಊ ನಕ್ಷೆಯ ಮುಖಮಲಿನ್ ಉಡುಪುಗಳನ್ನು ಹೇಳುತ್ತಾನೆ. ಚಂದ್ರಗುಪ್ತನ ಕಾಲದಲ್ಲಿ ಉಣ್ಣೆ, ರೇಶ್ಮೆ, ಗಿಡದ ನಾರು ಇತ್ಯಾದಿಗಳಿಂದ ನೂಲನ್ನು ಬಳಸಿ ಬಟ್ಟೆ ತಯಾರಿಸುತ್ತಿದ್ದನ್ನು ಉಲ್ಲೇಖಿಸುತ್ತಾನೆ.

ವೇದಕಾಲದಲ್ಲಿ

‘‘ಇಲಿಗಳು ನೇಕಾರರ ಎಳೆಗಳನ್ನು ತಿನ್ನುವಂತೆ, ಚಿಂತಾತೂರತೆಗಳು ನನ್ನನ್ನು ತಿಂದು ಸಣ್ಣಗೆ ಮಾಡುತ್ತವೆ’’ ಎಂದು ಋಗ್ವೇದದಲ್ಲಿ ಹೇಳಲಾಗಿದೆ. ‘‘ನೇಕಾರರು ಮಗ್ಗದ ವೆ ಲಾಳಿ ಎಸೆಯುವಂತೆ, ರಾತ್ರಿ ಮತ್ತು ಹಗಲು ಭೂಮಿಯ ಮೇಲೆ ಬೆಳಕು ಮತ್ತು ಕತ್ತಲನ್ನು ಚೆಲ್ಲುತ್ತವೆ’’ ಎಂಬ ಉಪಮೇಯ ಅರ್ಥವರ್ಣದಲ್ಲಿದೆ. ‘‘ಬ್ರಹ್ಮಸ್ಪತಿಯ ಇಂದ್ರನಿಗೆ ಅಮರತ್ವದ ವಸ್ತ್ರವನ್ನು ತೊಡಿಸಿದ ರೀತಿಯಲ್ಲಿಯೇ ನಾನು ಸಹ ನಿನಗೆ ಈ ವಸ್ತ್ರವನ್ನು ತೊಡಿಸಿ, ದೀರ್ಘಾಯು, ಉತ್ತಮ ವೃದ್ಯಾಪ, ಶಕ್ತಿ ಮತ್ತು ವೈಭವವನ್ನು ಕೋರುತ್ತೇನೆ’’ ಎಂದು ಆಚಾರ್ಯನು ಉಪನಯನ ಸಮಯದಲ್ಲಿ ವಟುವಿಗೆ ವಸ್ತ್ರ ಸಲ್ಲಿಸುತ್ತಾನೆ (ಹೀರಣ್ಯ ಕೇಶಿಗ್ರಹ ಸೂತ್ರ). ತಂತುವರ್ಧನ ಅಥವಾ ನೇಕಾರನೆಂದು ವರ್ಣಿಸಲಾಗುವ ವಿಷ್ಣು, ಸೂರ್ಯನ ಕಿರಣಗಳನ್ನು ನೈದು ತನಗಾಗಿ ಒಂದು ವಸ್ತ್ರವನ್ನು ಸಿದ್ಧಪಡಿಸಿದ ವರ್ಣನೆ ಇದೆ. ಋಗ್ವೇದ ಮತ್ತು ಸಂಗಮ ಸಾಹಿತ್ಯದಲ್ಲಿ ಉಂಕಿ ಮತ್ತು ಹುಕ್ಕಿನ ಅನೇಕ ಪ್ರಸ್ತಾವನೆಗಳಿವೆ.

ಪುರಾಣಕಾಲ

‘‘ಸೀತಾದೇವಿಯ ಕರಂಡಕದಲ್ಲಿ ರದ ಮತ್ತು ರೇಷ್ಮೆಯ ಅನೇಕ ಪಿತಾಂಬರಗಳಿರುವವು’’. ಧರ್ಮ ರಾಜನು ಯಾಗವನ್ನು ಮಾಡಿದಾಗ ಅನೇಕ ಮಾಂಡಲಿಕರು, ರಾಜರು ‘‘ರೇಷ್ಮೆ ಹಾಗೂ ಉತ್ತಮ ದರ್ಜೆಯ ವಸ್ತುಗಳನ್ನು’’ ಕಾಣಿಕೆಯಾಗಿ ನೀಡಿದರಂತೆ. ಈ ಮಾತುಗಳಿಂದ ರಾಮಾಯಣ, ಮಹಾಭಾರತದ ಕಾಲದಲ್ಲಿಯು ನೇಕಾರಿಕೆಯ ಉರ್ಜಿತವಾಗಿತ್ತು.

ಇತಿಹಾಸಕಾಲ

ಇತಿಹಾಸಪೂರ್ವದಿಂದಲೂ ಬೆಳೆದು ಬಂದ ನೇಕಾರಿಕೆ ಭಾರತದ ಇತರೆ ಭಾಗದಲ್ಲಿ ಇರುವಂತೆ ಕರ್ನಾಟಕದಲ್ಲಿಯು ಅತಿ ಪ್ರಾಚೀನಕಾಲದಿಂದಲೂ ನೇಕಾರಿಕೆ ನಡೆದುಕೊಂಡು ಬಂದಿರುವುದಕ್ಕೆ ಅನೇಕ ಚಾರಿತ್ರಿಕ ದಾಖಲೆಗಳಿಂದ ತಿಳಿದುಬರುತ್ತದೆ. ೧೧ನೇ ಶತಮಾನದ ಶರಣ ಅಧ್ಯವಚನಕಾರ ದೇವರ ದಾಸಿಮ್ಯನವರು ಈ ವೃತ್ತಿಯಿಂದಲೇ ದೇವರನ್ನು ಕಂಡವರು.

ಉಂಕೆಯನಿಗೂಚಿ, ಸರಿಗೆಯ ಸಮಗೊಳಿಸಿ|
ಸಮಗಾಲನಿಕ್ಕಿ ಅಣಿಕೊಳೆರಡು ಮೆಟ್ಟಿದೆ||
ಹಿಡಿದ ತಾಳಿಯ ಮುಳ್ಳು ಕಂಡಿಕೆಯ ನುಂಗ್ಗಿತ್ತು|
ಈ ಸಿರೆಯ ನೈಯದವ ನಾನೂ, ನೀನೂ ಕಾಣಾ ರಾಮನಾಥ||

ದಾಸಿಮ್ಯನವರಿಗೆ ನೇಯ್ಗಿ ವೃತ್ತಿಯೇ ಪ್ರವೃತ್ತಿ ಆಯಿತು. ಆ ಪ್ರವತ್ತೆಯೇ ಪರಮಾತ್ಮನ ಸಾಧನೆಗೆ ಸೋಪಾನವಾಯಿತು. ವೃತ್ತಿ ಆಧ್ಯಾತ್ಮಿಕರಣವಾಯಿತು. ಜೇಡವೃತ್ತಿ, ದೇವವೃತ್ತಿ ಆಯಿತು. ಜೇಡರ್ ದಾಸಿಮ್ಯ-ದೇವರ ದಾಸಿಮಯ್ಯನಾದನು. ಹಿಡಿದ ಲಾಳಿಯ ಮುಳ್ಳು ಕಂಡಿಕೆಯ ನುಂಗಿತ್ತು ಎಂಬುದನ್ನು ಬೆಡಗಿನ ಮಾತು. ಇದು ಸಾಧನೆಯ ರಹಸ್ಯದ ಮಾತು. ದೇಹದಿಂದಲೇ ದೇವರ ಸಾಕ್ಷತ್ಕಾರವಾಯಿತು. ಮುಳ್ಳು ಕಂಡಿಕೆಯ ನುಂಗಿತ್ತು ಎಂದರೆ ಅಶಾಶ್ವತವಾದ ದೇಹ, ಶಾಶ್ವತವಾದ ದೇವರನ್ನು (ತನ್ನಲ್ಲಿಯೇ ಪಿಂಡ ರೂಪದಲ್ಲಿದ್ದ) ಕಂಡಿತು ಎಂದರ್ಥ. ಶಿವ, ಕಾಯ ಮತ್ತು ಕಾಯಕದಿಂದಲೇ ಸಾಧ್ಯ. ವ್ಯಷ್ಟಿ ತನ್ನಲ್ಲಿದ್ದ ಸಮಷ್ಟಿಯನ್ನು ಸಾಧನೆಯಿಂದ ಸುಯಾನುಭವ ಮಾಡಿಕೊಂಡು ಚಿಕ್ಕದು (ಮುಳ್ಳು) ದೊಡ್ಡದನ್ನು(ಕಂಡಿಕೆಯನ್ನು) ನುಂಗಿತ್ತು ಎನ್ನುವುದು ಸಂಕೇತ (ಪ್ರೊ.ಕೆ.ಜಿ.ನಾಗರಾಜ).

ವಿಜಯನಗರ ಕಾಲದಲ್ಲಿ ಪ್ರಾಮುಖವಾದ ಉದ್ಯಮವಾಗಿದ್ದ ನೇಕಾರಿಕೆಯಿಂದಲೇ ಸಾಮ್ರಾಜ್ಯಕ್ಕೆ ಹೆಚ್ಚಿನ ಆದಾಯ ಲಭ್ಯವಾಗುತ್ತಿತ್ತು. ಶ್ರೀಕೃಷ್ಣದೇವರಾಯನ ‘‘ಅಮೂಕ್ತ ಮಲ್ಯ’’ದಲ್ಲಿ ಹತ್ತಿ ಮತ್ತು ರೇಷ್ಮೆ ನೇಕಾರರ ಬಗ್ಗೆ ಉಲ್ಲೇಖವಿದ್ದು, ಮಗ್ಗಗಳ ಸಂಖ್ಯೆಗನುಗುಣವಾಗಿ ತೆರಿಗೆ ಹಾಕುತ್ತಿದ್ದರು. ಅದನ್ನು ಮಗ್ಗರಿ-ಮಗ್ಗದೇರೇ ಎನ್ನುತ್ತಿದ್ದು.

ಶಾಸನಗಳಲ್ಲಿ

ಮಂಡಸೂರು ಶಿಲಾಶಾಸನದಲ್ಲಿ ಕ್ರಿ.ಶ.೪೩೭ರಲ್ಲಿ ಕಟ್ಟಿಸಿದ ಸೂರ್ಯನಾರಾಯಣ ದೇವಸ್ಥಾನವನ್ನು ದೇವಾಂಗ ಸಂಘವು ಕ್ರಿ.ಶ.೪೭೩ರಲ್ಲಿ ಜಿರ್ಣೋದ್ಧಾರ ಮಾಡಿದ ದಾಖಲೇ ಇದೆ. ನೇಕಾರರನ್ನು ಶಾಸನಗಳಲ್ಲಿ ‘ಸಾಲಿಗ’ ಎಂದು ಕರೆಯಲಾಗಿದೆ. ಮಗ್ಗದ ಮೇಲೆ ‘ಮಗ್ಗದೇರೆ’ ಎಂಬ ತೆರಿಗೆಯನ್ನು ವಿಧಿಸುತ್ತಿದ್ದರು(ಯಲಿಯಾರ ಚನ್ನಪಟ್ಟಣ ತಾಲ್ಲೂಕು ಶಾಸನ ಕ್ರಿ.ಶ.೧೭೨೬). ನೇಕಾರರನ್ನು(ಪಟ್ಟಗಣಿ) ರೇಷ್ಮೆ ನೇಯುವ ಎಂದು ಉಲ್ಲೇಖಿಸುವ ಕ್ರಿ.ಶ.೭೯೩ರ ಲಕ್ಷ್ಮೇಶ್ವರ ಶಾಸನ.

ಒಂದೇ ರೀತಿಯ ಕುಶಲ ವಸ್ತುಗಳನ್ನು ತಯಾರಿಸುತ್ತಿದ್ದದು. ಒಂದೇ ಜನಾಂಗ ಅಥವಾ ಸಮುದಾಯ ಕ್ರಮೇಣ ಒಂದು ಜಾತಿ ಎನಿಸಿತ್ತು. ನೇಗಿಯ ಕೆಲಸವನ್ನು ಮಾಡುತ್ತಿದ್ದ ಜನರು ನೇಕಾರರೆಂದೆನಿಸಿದರು. ಪಾರಂಪರಿಕವಾಗಿ ನೇಕಾರಿಕೆಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬಂದವರಲ್ಲಿ ಪ್ರಮುಖವಾದ ಸಮುದಾಯಗಳು ದೇವಾಂಗ, ಪದ್ಮಶಾಲಿ, ಸ್ವಕುಳಸಾಲಿ, ಕುರಿಹೀನಶೆಟ್ಟಿ, ತೋಗಟವೀರರು ಇತ್ಯಾದಿ. ಇದರ ಜೊತೆಗೆ ಜೀವನೋಪಯಕ್ಕಾಗಿ ಹಾಗೂ ಲಾಭ ಗಳಿಕೆಗಾಗಿ ಇತ್ತೀಚಿಗೆ ಲಿಂಗಾಯತರು, ಕ್ರಿಶ್ಚಿಯನರು, ಇತರೆ ಸ್ಥಳೀಯ ಸಮುದಾಯ ಕೂಡಾ ನೇಕಾರಿಕೆಯನ್ನು ಅವಲಂಬಿಸಿರುವುದನ್ನು ಕಾಣುತ್ತೇವೆ.

ನೇಕಾರರಲ್ಲಿ ಅನೇಕ ಪಂಗಡಗಳನ್ನು ಕಾಣಬಹುದು ಅವೆಲ್ಲದ್ದಕ್ಕೂ ತಮ್ಮದೇ ಆಆದ ದೈವ, ದೇವರು, ನಂಬಿಕೆ, ಕುಲಕಟ್ಟಣೆಗಳಿವೆ. ನೇಕಾರ ಪಂಗಡಗಳಲ್ಲಿ ವಿವಾಹ ಸಂಬಂಧವಾಗಲಿ, ಬೋಜನಸಂಪರ್ಕವಾಗಲಿ ಕಂಡುಬರುವುದಿಲ್ಲ.

ದೇವಾಂಗ

ದೇವರ ಅಂಗದಿಂದ ಜನಿಸಿದ್ದರಿಂದ ಈ ಸಮುದಾಯದವರಿಗೆ ‘ದೇವಾಂಗ’ವೆಂದು ಹೆಸರು. ಅಲ್ಲದೇ ದೇವತೆಗಳ ಪ್ರಾರ್ಥನೆಯನ್ನು ಈಡೇರಿಸಿದುದ್ದಕ್ಕಾಗಿ ‘ದೇವಲ’ನೆಂದು ಎರಡು ಹೆಸರುಗಳನ್ನು ಹೊಂದಿದ್ದಾನೆ.

‘‘ದೇವಸ್ಯ ಅಂಗಾತ್ ಸಂಜಾತತ್ಪಾತ್ ದೇವಾಂಗ ಇತಿ|
ಸರ್ವ ದೇವ ಪ್ರಾರ್ಥನಾನಾಂ ಲಾಲೇತಿ ತಸ್ಯ ದೇವಲ||
ಇತೀಚನಾಮದ್ವಯಮಭೂತ್’’
                               -ದೇವಲೋಪನಿಷತ್ತು

ದೇವಲ ಮಹರ್ಷಿ ಜಗತ್ತಿಗೆ ಸೂತ್ರ, ವಸ್ತ್ರ ಪ್ರದಾತಾ. ನೇಕಾರಿಕೆಯು ಈ ಸಮುದಾಯದ ಮೂಲ ಕಸುಬು. ದೇವಾಂಗರು ನೇಕಾರರು. ಆದರೆ ಎಲ್ಲಾ ನೇಕಾರರು ದೇವಾಂಗರಲ್ಲ.

ಮೂಲ ಪುರು : ದೇವಲ ಮಹರ್ಷಿ ಅಥವಾ ದೇವಾಂಗ ಮಹರ್ಷಿ

ಕುಲದೇವತೆ : ಬನಶಂಕರಿ ಅಥವಾ ಚೌಡೇಶ್ವರಿ

ಜಗದ್ಗುರು ಪೀಠ : ಹಂಪೆ, ಹೇಮಕೂಟ್, ಶ್ರೀ ಗಾಯತ್ರಿ ಪೀಠ

ಜಗದ್ಗುರು : ಶ್ರೀ ಶ್ರೀ ಶ್ರೀ ದಯಾನಂದಪೂರಿ ಮಹಾಸ್ವಾಮಿಜಿ

ಧರ್ಮದ್ವಜ : ಹಳದಿ ಬಣ್ಣದ ಧ್ವಜ ಅದರಲ್ಲಿ ಆಕಳು ಗಾಯತ್ರಿ ಸೂರ್ಯ ಮತ್ತು ಚಂದ್ರ

ಕುಲಸೇವಕರು : ಸಿಂಗದವರು

ಕುಲಕಸಬು : ನೇಕಾರಿಕೆ

 

ಪದ್ಮಶಾಲಿ

 

ಕಾಳವಾಸುರನೆಂಬ ರಾಕ್ಷಸನ ಉಪಟಳ ನಿವಾರಣೆಗಾಗಿ ಶಿವನ ಅಜ್ಞೆಯಂತೆ ಮಾರ್ಕಂಡೇಯ ಮಹರ್ಷಿಯು ಯಜ್ಞ ಒಂದನ್ನು ನಡೆಸುತ್ತಾನೆ. ಪೂರ್ಣಾವತಿಯಾದ ಮೇಲೆ ವಿಷ್ಣುವಿನ ಅಂಶದಿಂದ ತೇಜಸ್ವಿಯಾದ ಒಂದು ಮಗ ಅಗ್ನಿಕುಂಡದಿಂದ ಹೊರಬರುತ್ತದೆ. ಅದೇ ಭಾವನಾಋಷಿ.

ಮೂಲ ಪುರುಷ : ಭಾವನಾಮಹರ್ಷಿ

ಕುಲದೇವತೆ : ಮಾರ್ಕಂಡೇಯಸ್ವಾಮಿ

ಧರ್ಮಧ್ವಜ : ಬಿಳಿ ಬಣ್ಣ ೨ ೩ ಅಗಲ ಉದ್ದ, ಮಧ್ಯ ಹುಲಿ

ಜಗದ್ಗುರು : ಲಂಕೀ ಮಗ ಪಡಗಿರಾಜ

ಕುಲಕಸಬು : ನೇಕಾರಿಕೆ

 

ಸ್ವಕುಳಶಾಳಿ

ಶಿವನು ತನ್ನ ನಾಲಿಗೆಯಿಂದ ಜಿವ್ಹೇ ಒಬ್ಬ ಪುರುಷನನ್ನು ಉತ್ಪನ್ನ ಮಾಡಿದನು. ಅವನಿಗೆ ಜೀವ್ಹಾಜಿ ಅಥವಾ ಜಿವ್ಹೇಶ್ವರನೆಂದು ಕರೆದನು. ತನ್ನ ಕುಲವನ್ನು ಉದ್ಧಾರ ಮಾಡುವನೆಂದು ಸಕುಲನೆಂದು ಹೆಸರಾದನು. ಈತನ ಜನ್ಮ ಶ್ರಾವಣ ಶುಕ್ಲ ತ್ರಯೋದಶಿ ಜಗತ್ತಿಗೆ ಬಟ್ಟೆಯನ್ನು ದಯಪಾಲಿಸಿದನೆಂದು ನಂಬಿಕೆ.

ಮೂಲ ಪುರುಷ : ಜಿವ್ಹೇಶ್ವರ ಮಹರ್ಷಿ

ಕುಲದೇವತೆ : ಭವಾನಿ

ಜಗದ್ಗುರು ಪೀಠ : ಮುಂಗೀ ಪೇಠಾಣ, ಮಹಾರಾಷ್ಟ್ರ

ಕುಲಕಸಬು : ನೇಕಾರಿಕೆ ತೋಗಟವೀರರು

ಮೂಲ ಪುರುಷ : ಮಹರ್ಷಿ ಪುಷ್ಪಾಂಡ ಮುನಿಗಳು

ಕುಲದೇವತೆ : ಚೌಡೇಶ್ವರಿ

ಜಗದ್ಗುರು ಪೀಠ : ತಪ್ಸಿಹಳ್ಳಿ, ದೊಡ್ಡಬಳ್ಳಾಪುರ

ಜಗದ್ಗುರು : ಶ್ರೀ ಶ್ರೀ ಶ್ರೀ ದಿವ್ಯಜ್ಞಾನಾನಂದ ಗಿರಿ ಸ್ವಾಮಿಜಿ

 

 

ನೇಕಾರರ ನಂಬಿಕೆಗಳು (ಎಲ್ಲ ಪಂಗಡದವರು)

ನೇಕಾರರು ತಾವು ಉಪಯೋಗಿಸುವ ಸಾಧನ, ಸಲಕರಣೆಗಳನ್ನು ದೈವಿ ಸ್ವರೂಪವೆಂದು ನೇಗೆಯನ್ನು ಪ್ರಾರಂಭಿಸುವ ಮುನ್ನ ಮಗ್ಗಕ್ಕೆ ನಮಸ್ಕರಿಸಿ ಕೂಡುತ್ತಾರೆ. ಪ್ರತಿಯೊಂದು ನೇಗೆಯ ಸಾಧನೆ ತನ್ನದೇ ಆದ ಮಹತ್ವವನ್ನು ಹೊಂದಿದೆ. ಉದಾಹರಣೆಗೆ ಎರಡು ಪಾದ ಚಕ್ಕೆಗಳನ್ನು ಶಿವನ ಪಾದವೆಂದು, ಮಿಣೇಬುಟವನ್ನು ಈಶ್ವರನೆಂದು, ಮಗ್ಗದ ಹಗ್ಗವನ್ನು ಪಾಶವೆಂದು ಹೇಳುತ್ತಾರೆ. ಎಡಗಡೆ ಲಾಳಿ ಬೀಡಬಾರದು. ಎದರು ಹಲಗೆ ಕುಂಟಿ ಬೀಡಬಾರದು. ಎದ್ದರೇ ಎಳ್ಳೆ ಕಮ್ಮಿ ಇತ್ಯಾದಿ. ನೇಕಾರರು ಬಹಳೆ ಬಡವರು. ಏಕೆಂದು ಕೇಳಿದಾಗ ಒಂದು ಕಥೆಯನ್ನು ಹೇಳುತ್ತಾರೆ. ‘‘ಒಮ್ಮೆ ದೇವರು ವಿವಿಧ ವೃತ್ತಿಗಳನ್ನು ಅವಲಂಬಿಸಿದವರಿಗೆ ಕರೆದನಂತೆ ಆಗ ಎಲ್ಲರೂ ಹೊರಟ ಹೋದರು. ಆದರೆ, ನೇಕಾರ ಮಾತ್ರ ಹೋಗಲಿಲ್ಲ. ಕಾರಣ ನೆಯಿತ್ತಿದ್ದ. ಲಾಳಿಗೆ ಹಾಕಿದ ಕಂಡಿಕೆ ಅರ್ಧ ಮುಗಿದಿತ್ತು. ತಾಳು, ಈ ಕಂಡಿಕೆ ಎಳೆ ಮುಗಿದು ಹೋಗಲಿ ನಂತರ ಹೋದರಾಯಿತು ಎಂದು ಕಂಡಿಕೆ ಮುಗಿದ ನಂತರ ಹೋದಾಗ ದೇವರು ಇತರೆ ವೃತ್ತಿಯವರಿಗೆ ವರಕೊಟ್ಟು ಹೋಗಿದ್ದನಂತೆ. ಹಾಗಾಗಿ ನೇಕಾರರು ಅದೃಷ್ಟ ವಂಚಿತರು, ಬಡವರು’’. ಕಾರಣ ಅವರಲ್ಲಿ ಒಂದು ಹೇಳಿಕೆ ಇದೆ. ‘‘ಅರಬೋಟಿಗೆ ಅರಸುತನ ಕಳಕೊಂಡರು’’.

ಸಾಮಾನ್ಯ ಆಚರಣೆ (ಎಲ್ಲ ಪಂಗಡಗಳಿಗೆ)

ಎಲ್ಲಾ ನೇಕಾರ ಪಂಗಡದವರು ಇಲಿ ಪೂಜೆ ಅಥವಾ ಇಲಿವಾರು ತಪ್ಪದೇ ಆಚರಿಸುತ್ತಾರೆ. ಗಣೇಶ ಚತುರ್ಥಿಯ ಮರುದಿನ ಈ ಹಬ್ಬವನ್ನು ಆಚರಿಸುತ್ತಾರೆ. ಅಂದು ಮಗ್ಗಗಳಿಗೆ ಬಿಡವು. ಅಂದು ಯಾರು ಮಗ್ಗದ ಮೇಲೆ ಕುಳಿತು ಕೆಲಸ ಮಾಡುವಂತಿಲ್ಲ. ಒಂದು ವೇಳೆ ಕೆಲಸ ಮಾಡಿದರೆ ಇಲಿಗಳು ಎಳೆಗಳನ್ನು ಕಡಿಯುತ್ತವೆಂಬ ಸಾಮಾನ್ಯ ನಂಬಿಕೆ. ಆದುದರಿಂದಲೇ ಆ ದಿನದ ಮಟ್ಟಿಗೆ ನೇಕಾರರು ಯಾರು ಮಗ್ಗದ ಮೇಲೆ ಕೆಲಸ ಮಾಡುವುದಿಲ್ಲ. ಒಂದು ವೇಳೆ ಮಗ್ಗದ ಮೇಲೆ ಹಾಕಿದ ಕೆಲಸ ಅರ್ಧವಾಗಿದ್ದರೆ ಅದನ್ನು ಹಾಗೆಯೇ ಬಿಟ್ಟು ಮಡಿಸಿಡುತ್ತಾರೆ.

ಮನೆಯ ಯಜಮಾನ ಅಂದು ಕಣಕದ ಎರಡು ಇಲಿಗಳನ್ನು ಹುರಣ ತುಂಬಿದ ಮಾಡಿ ಪೂಜೆ ಮಾಡಿ, ಮಗ್ಗದ ಬಳಿ ಇಡುತ್ತಾನೆ. ಪೂಜೆಯ ನಂದರ ಒಂದನ್ನು ಪ್ರಸಾದವೆಂದು ತೆಗೆದುಕೊಂಡು ಮನೆಯವರೆಲ್ಲರು ತಿನ್ನುತ್ತಾರೆ. ಒಂದನ್ನು ಸಂಪೂರ್ಣವಾಗಿ ಇಲಿಗಳಿಗೆ ಬೀಡುತ್ತಾರೆ. ಜೊತೆಗೆ ಅಳ್ಳು, ಪುಟಾಣಿ, ಖೋಬರಿ ಇತ್ಯಾದಿಗಳನ್ನು ಕೂಡಾ ಇಲಿಗಳಿಗೆ ಆಹಾರವಾಗಿ ಬಿಟ್ಟಿರುತ್ತಾರೆ.

ಆಚರಣೆ ಹಿನ್ನೆಲೆ

ಇಲಿಯನ್ನು ಒಲಿಸಿಕೊಳ್ಳುವ ಮನೋಭಾವ. ಇಲಿಗಳು ನೇಕಾರಿಕೆ ಕಸುಬಿಗೆ ಮಾರಕ. ಅದಕ್ಕೆ ನೇಕಾರ ನಮಸ್ಕಾರಿಸಿ, ದೇವಸ್ಥಾನ ನೀಡಿ ತಮಗೆ ತೊಂದರೆ ಆಗದಿರಲೆಂದು ತನ್ನ ಕ್ಷೇಮಕ್ಕಾಗಿ ಅನುಸರಿಸುವ ಪೂಜೆ ಆಗಿದೆ. ಈ ಪೂಜೆಯನ್ನು ಮಾಡಿದರೆ ಎಳೆಗಳನ್ನು ಕಡೆಯುವುದಿಲ್ಲವೆಂದು ದೃಢ ನಂಬಿಕೆ.

ಸಮಾರೋಪ

ಎಲ್ಲಾ ನೇಕಾರ ಸಮುದಾಯಕ್ಕೆ ಶಿವನೇ ಮೂಲ. ಪಾರ್ವತಿಯನ್ನು ಅನೇಕ ಹೆಸರುಗಳಿಂದ ತಮ್ಮ ತಮ್ಮ ಕುಲದೇವತೆಯನ್ನಾಗಿ ಮಾಡಿಕೊಂಡಿರುತ್ತಾರೆ. ಅಲ್ಲದೇ ಕುಲಸೇವಕರಾಗಿ ಒಬ್ಬ ರಾಕ್ಷಸ ಸಂತತಿಯವನಿರುತ್ತಾನೆ. ಎಲ್ಲ ಪಂಗಡದವರಿಗೆ ಋಷಿ ಮೂಲ, ಜಗದ್ಗುರು ಪೀಠ, ಪೀಠಾಧಿಪತಿಗಳಿದ್ದಾರೆ. ಸಾಮಾನ್ಯವಾಗಿ ಎಲ್ಲಾ ಪಂಗಡದವರು ಜನಿವಾರಧಾರಿಗಳು ಯಜ್ಞೋಪವಿತಧಾರಿಗಳು ಉಪನಯವನ್ನು ಮಾಡುತ್ತಾರೆ. ಕೆಲವೆಡೆ ಲಿಂಗಧಾರಣೆ ಕಂಡುಬರುತ್ತದೆ. ಇನ್ನೂ ಕೆಲವೆಡೆ ಲಿಂಗ, ಜನಿವಾರ ಕಾಣುವುದಿಲ್ಲ. ಶಿವ ಮತ್ತು ವಿಷ್ಣುವಿನ ಪೂಜೆ ಭೇದವಿಲ್ಲದೇ ಮಾಡುತ್ತಾರೆ. ಶವವನ್ನು ಹೆಚ್ಚಿನವರು ಸುಡುತ್ತಾರೆ. ಕೆಲವರು ಹುಗಿಯುತ್ತಾರೆ. ಎಲ್ಲ ಪಂಗಡಗಳಿಗೂ ಗೋತ್ರ, ಸೂತ್ರ, ಪ್ರವರಗಳಿಗೆ, ಒಂದೇ ಗೋತ್ರದವರ ಮದುವೆ ನಿಷೇಧ, ದೇವಾಂಗ ಪದ್ಮಸಾಲಿಗಳಿಗೂ ಗೋತ್ರ ಸೂತ್ರದಲ್ಲಿ ಸೌಮ್ಯವಿದೆ. ಸಮಾಜದಲ್ಲಿ ದೇವಾಂಗರಿಗೆ ಉನ್ನತ ಸ್ಥಾನವಿದೆ.

* * *

 

 

ಪುಸ್ತಕ: 
ಲೇಖಕರು: 
ಪ್ರಕಾಶಕರು: 
ಸಂಪುಟ ಸಂಪಾದಕರು: 

Image: 
Categories: 
Share Share
Scroll to Top