88929 25504
 
  • Total Visitors: 3750468
  • Unique Visitors: 309586
  • Registered Users: 35960

Error message

  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).

  • Deprecated function: implode(): Passing glue string after array is deprecated. Swap the parameters in drupal_get_feeds() (line 394 of /home4/devan1ay/public_html/includes/common.inc).

ಎಲ್ಲಾ ದೇವಾಂಗ ಕುಲಬಾಂಧವರಿಗೆ *ದೇವಾಂಗ ವರ್ಲ್ಡ್ ಶ್ರೀ ಸೆಂಥಿಲ್ ಕುಮಾರ್ ಕೃಷ್ಣಸ್ವಾಮಿಯಾದ ನನ್ನ ಹೃದಯಪೂರ್ವಕ  ನಮಸ್ಕಾರಗಳು.*

ಇಂದು ಮಂಗಳವಾರ 22-12-2020 “ದೇವಾಂಗ ವರ್ಲ್ಡ್ ಚಾರಿಟಬಲ್ ಟ್ರಸ್ಟ್” ಪರವಾಗಿ ಅಧ್ಯಕ್ಷರಾದ ನಾನು ಶ್ರೀ ಸೇಂಥಿಲ್ ಕುಮಾರ್ ಕೃಷ್ಣಸ್ವಾಮಿ ಹಾಗು ದೇವಾಂಗ ಕುಲ ರತ್ನ ಶ್ರೀ M S ನಾಗೇಂದ್ರ, ಖಜಾಂಚಿಗಳಾದ ಶ್ರೀ R ಮೋಹನ್ ರಾಜ್, ಟ್ರಸ್ಟಿಗಳಾದ ಶ್ರೀ ಸಂತೋಷ್ ಕುಮಾರ್ ಕೃಷ್ಣಸ್ವಾಮಿ, ಶ್ರೀ ನಾಗರಾಜ್ ಮತ್ತು ಶ್ರೀ ಗಿರಿ ಸೇರಿದಂತೆ "ದೇವಾಂಗ ವರ್ಲ್ಡ್ ಚಾರಿಟಬಲ್ ಟ್ರಸ್ಟ್" ಸದಸ್ಯರು ಕರ್ನಾಟಕದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ. ಬಿ.ಎಸ್ ಯಡಿಯೂರಪ್ಪನವರನ್ನು ಅವರ ಗೃಹ ಕಚೇರಿಯಲ್ಲಿ ಭೇಟಿಯಾಗಿ ದೇವಾಂಗ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪಿಸಿ ಕೊಡಬೇಕೆಂದು ಮತ್ತು ದೇವಾಂಗ ಜನರಿಗೆ ಅಗತ್ಯ ಸೌಲಭ್ಯಗಳು ಸಿಕ್ಕದೇ ಇರುವ ಕಾರಣಗಳ ಬಗ್ಗೆ ವಿವರವಾಗಿ ತಿಳಿಸಿಕೊಡಲಾಗಿದೆ ಎಲ್ಲವನ್ನು ತಾಳ್ಮೆಯಿಂದ ಆಲಿಸಿದ ಮುಖ್ಯಮಂತ್ರಿಗಳು ನಮ್ಮ "ದೇವಾಂಗ ವರ್ಲ್ಡ್ ಚಾರಿಟಬಲ್ ಟ್ರಸ್ಟ್" ಮನವಿಯನ್ನು ಪರಿಶೀಲಿಸುವುದಾಗಿ ಆಶ್ವಾಸನೆ ನೀಡಿದ್ದಾರೆ. 

ನಮ್ಮ ದೇವಾಂಗ ಕುಲದವರಿಗೆ "ದೇವಾಂಗ ಅಭಿವೃದ್ಧಿ ನಿಗಮ" ಅಂದರೆ ಏನು, ಈ ನಿಗಮದಿಂದ ನಮಗೇನು ಉಪಯೋಗ, ನಿಗಮವನ್ನು ಯಾರು ನಡೆಸುತ್ತಾರೆ ಸರ್ಕಾರವೊ ಅಥವಾ ದೇವಾಂಗ ಸಂಘ ಸಮಸ್ಥೆಗಳೋ, ಇಂತಹ ಹಲವಾರು ಪ್ರಶ್ನೆಗಳು ಸಹಜವಾಗಿ ಇರುತ್ತದೆ. ಈ ಉದ್ದೇಶಕ್ಕಾಗಿ  ಶ್ರೀ ಸೆಂಥಿಲ್ ಕುಮಾರ್ ಕೃಷ್ಣಸ್ವಾಮಿಯಾದ ನಾನು ತಿಳಿದುಕೊಂಡಿರುವ ಮತ್ತು ಕರ್ನಾಟಕ ಸರ್ಕಾರವನ್ನು ದೇವಾಂಗ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪಿಸಿ ಕೊಡಲು ಒತ್ತಾಯಿಸುವ ಕಾರಣಗಳನ್ನು ನಿಮ್ಮ ಗಮನಕ್ಕೆ  ತರುತ್ತಿದ್ದೇನೆ. 

ದೇವಾಂಗ ಅಭಿವೃದ್ಧಿ ನಿಗಮ ಅಂದರೆ ಯಾವುದೇ ಒಂದು ಸಮಾಜದ/ ವರ್ಗದ / ಅಥವಾ ಒಂದು ಗೊತ್ತುಪಡಿಸಿದ ಜಾತಿಗೆ/ ಜನಾಂಗದವರಿಗೆ/ ಗುಂಪಿಗೆ ಸಂಬಂಧಿಸಿದಂತೆ ಅವರ ಆರ್ಥಿಕ /ಹಣಕಾಸು ಸ್ಥಿತಿಗತಿಗಳನ್ನು ಉತ್ತಮ ಪಡಿಸಲು ಸರ್ಕಾರದಿಂದ ಅನುದಾನವನ್ನು ಮೀಸಲಿಟ್ಟು ಹಲವು ಯೋಜನೆಗಳ ಮೂಲಕ ಆ ಜನಾಂಗದವರಿಗೆ ಹಣಕಾಸಿನ ನೆರವು ನೀಡಲು ಪ್ರತ್ಯೇಕವಾಗಿ ಸರ್ಕಾರದ ಕಡೆಯಿಂದ ಸ್ಥಾಪಿಸಲು ಪಡುವ ಅಧಿಕೃತ ಸಂಸ್ಥೆಗೆ ನಿಗಮ ಅನ್ನುತ್ತಾರೆ. ಪ್ರತ್ಯೇಕವಾಗಿ ದೇವಾಂಗ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪಿಸಿ ಕೊಡಲು ಸರ್ಕಾರದಲ್ಲಿ ಮಾನವಿ ಮಾಡುವ ಕಾರಣ ಈಗಾಗಲೇ ಸರ್ಕಾರವು ಇತರೆ ಜಾತಿಗಳಿಗೆ  ಪ್ರತ್ಯೇಕವಾಗಿ ಜನಾಂಗವಾರು ನಿಗಮ  ಮಾಡಿರುವಂತೆಯೇ  ದೇವಾಂಗ ಕುಲ ಜನಾಂಗದವರಿಗೆ ಪ್ರತ್ಯೇಕವಾಗಿ ಅನ್ವಯಿಸುವಂತಹ ದೇವಾಂಗ ಅಭಿವೃದ್ಧಿ ನಿಗಮವನ್ನು ರೂಪಿಸಿಕೊಟ್ಟಲ್ಲಿ ನಮ್ಮ ದೇವಾಂಗ ಜನರಿಗೆ ಆದ್ಯತೆ ಸಿಗುವುದು ಮಾತ್ರವಲ್ಲದೆ ನಮ್ಮ ಎಲ್ಲಾ ದೇವಾಂಗ ಜನರಿಗೂ ಅನೇಕ ಸೌಲಭ್ಯಗಳು ದೊರಕುತ್ತದೆ. ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪಿಸಿದಲ್ಲಿ ಸರ್ಕಾರದ ಅಧಿಕಾರಿಗಳು ಸೇರಿದಂತೆ ನಮ್ಮ ದೇವಾಂಗ ಸಮಾಜದ ಸದಸ್ಯರು ಕೂಡ ಈ ನಿಗಮದಲ್ಲಿ ಬಾಗಿಯಾಗಿರುತ್ತಾರೆ.  

ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪನೆ ಆಗುವುದರಿಂದ ನಮ್ಮ ದೇವಾಂಗ ಜನಾಂಗದವರು ಕೈಗೊಳ್ಳುವ ಕುಲಕಸುಬು ವೃತ್ತಿಯಾದ ನೇಕಾರಿಕೆಯಲ್ಲಿ ಕೈಮಗ್ಗ, ವಿದ್ಯುತ್ ಮಗ್ಗ ಮತ್ತೆ ನೇಕಾರಿಕೆಗೆ ಸಂಬಂಧಪಟ್ಟ ಹಲವಾರು ಕೆಲಸಗಳು, ಕಚ್ಚಾ ವಸ್ತುಗಳ ಮತ್ತು ನೇಕಾರಿಕೆ ಸಂಬಂಧಪಟ್ಟಂತಹ ವಸ್ತುಗಳು ಮಾರಾಟ ಸೇರಿದಂತೆ ಬಟ್ಟೆ ವ್ಯಾಪಾರ /ಮಾರಾಟಗಾರಿಕೆ ಹೀಗೆ ಸಾಮಾನ್ಯವಾದ ವೃತ್ತಿಗಳನ್ನು ಕೈಗೊಳ್ಳುವ  ಯಾವುದೇ ವೃತ್ತಿಗಳಿಗೆ  ಸಾಲ ಸೌಲಭ್ಯಗಳನ್ನು ಸರ್ಕಾರ ಕೊಟ್ಟು ಸಹಕರಿಸುವುದು. ಅದು ಮಾತ್ರವಲ್ಲದೆ ನಮ್ಮ ದೇವಾಂಗ ಮಕ್ಕಳ ವಿದ್ಯಾಭ್ಯಾಸಗಳಿಗೆ  ಹಣದ ಸಹಾಯ, ಕೈಮಗ್ಗ ವಿದ್ಯುತ್ ಮಗ್ಗ ಮತ್ತೆ ನೇಕಾರಿಕೆಗೆ ಸಂಬಂಧಪಟ್ಟ ಹಲವಾರು ಕೆಲಸಗಳ ಸಂಬಂಧದ ಕಸುಬುಗಳು ಗಂಗಾಕಲ್ಯಾಣ ಯೋಜನೆಗಳು ಹೈನುತಕೋತ್ತರ ವ್ಯಾಸಂಗಕ್ಕಾಗಿ ವೃತ್ತಿಪರ  ಕೋರ್ಸುಗಳಿಗೆ, ಡಿಪ್ಲೊಮಾ, ವೈದ್ಯಕೀಯ, ಪದವಿಪೂರ್ವ ಬಿ ಇ ಸೇರಿದಂತೆ ವಿದೇಶೀ ವ್ಯಾಸಂಗಕ್ಕಾಗಿಯೂ ದೇವಾಂಗ ಜನಾಂಗದ ಮಕ್ಕಳಿಗೆ ವಿದ್ಯಾಭ್ಯಾಸ ತಾಂತ್ರಿಕವಾದ ವೃತ್ತಿಪರವಾದ ಕಸುಬುಗಳಿಗೆ ಸಣ್ಣ-ಅತಿಸಣ್ಣ ವರ್ಗಗಳ ಆಧಾರದ ಮೇಲೆ ವಾರ್ಷಿಕ ವರಮಾನದ ನಿಗದಿಯ ಮೇರಿಗೆ ಸರ್ಕಾರದ ಸಹಾಯಧನ/ ನೆರವು ಕೊಟ್ಟು ಸಹಕರಿಸುವುದು. ಅನುದಾನದ ಲಭ್ಯತೆ ಮೇರೆಗೆ ಇಂತಹ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ. 

ಅದು ಮಾತ್ರವಲ್ಲದೆ ಆಯಾ ಜನಾಂಗದವರ ವೃತ್ತಿಗಳು ಅಲ್ಲದೇ ಇತರೆ ಯಾವುದೇ  ವೃತ್ತಿಗಳನ್ನು ಕೈಗೊಂಡಿದ್ದರೂ ಸಹ ತರಬೇತಿ ಮುಂತಾದ ಸರ್ಕಾರದ ಸಹಾಯ ಮತ್ತು ಸೌಲಭ್ಯಗಳು ಸಿಗುತ್ತದೆ. ದೇವಾಂಗ ಜನಾಂಗದ ಮಹಿಳೆಯರು ಕೈಗೊಳ್ಳುವ  ಉದ್ಯೋಗಗಳಿಗೂ ಸರ್ಕಾರದ ಆರ್ಥಿಕ ನೆರವು ಸಿಕ್ಕುತ್ತದೆ. ಸರ್ಕಾರದ ಸಾಲ ಪಡೆದರೆ ಸಾಲದ ಬಡ್ಡಿ ಮತ್ತು ಕಂತುಗಳು ಕೂಡ ದೇವಾಂಗ ಜನರಿಗೆ ಹೊರೆ ಆಗುವುದಿಲ್ಲ ಯಾಕೆಂದರೆ ನಿಗಮಗಳ ಮೂಲಕ ದೊರಕುವ ನೇರ ಸಾಲಗಳು ಮತ್ತು ಬ್ಯಾಂಕುಗಳ ಮೂಲಕ ಮಂಜೂರಾಗುವ ಸಾಲ ಸೌಲಭ್ಯಗಳಿಗೆ ವಾರ್ಷಿಕವಾಗಿ  ಕಡಿಮೆ ಬಡ್ಡಿ ದರಗಳು ಇರುತ್ತವೆ ಮತ್ತು ಗರಿಷ್ಠ ಪ್ರಮಾಣದ ಕಂತುಗಳಲ್ಲಿ ಸಾಲವನ್ನು ಮರುಪಾವತಿಸಬೇಕಾದ ಸರಳ ಮಾರ್ಗ ಸೌಲಭ್ಯ ಇರುತ್ತದೆ. ಈ ನಿಗಮವು  ಡಿ.ದೇವರಾಜ್ ಅರಸು ಹಿಂದುಳಿದ ಅಭಿವೃದ್ಧಿ ನಿಗಮದ ಜಿಲ್ಲೆಯ  /ತಾಲ್ಲೂಕು ಹಿಂದುಳಿದ  ವರ್ಗಗಳ  ಕಚೇರಿಗಳಲ್ಲಿ ಅರ್ಜಿ ಸಲ್ಲಿಸಿ ಸೌಲಭ್ಯಗಳನ್ನು ನಮ್ಮ ದೇವಾಂಗ ಜನರು ಪಡೆದುಕೊಳ್ಳಬಹುದು. 

ಕರ್ನಾಟಕದ ಎಲ್ಲಾ ದೇವಾಂಗ ಸಂಘ ಸಂಸ್ಥೆಗಳು ಸರ್ಕಾರವನ್ನು ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪಿಸಲು ಒತ್ತಾಯಿಸುತಿವೆ ಅದೇ ನಿಟ್ಟಿನಲ್ಲಿ  ದೇವಾಂಗ ವರ್ಲ್ಡ್ ಚಾರಿಟಬಲ್ ಟ್ರಸ್ಟ್ ವತಿಯಿಂದ  ಪ್ರಸ್ತುತ ನಾವು ದೇವಾಂಗ ಅಭಿವೃದ್ಧಿ ನಿಗಮವನ್ನು ಸರ್ಕಾರದ  ವತಿಯಿಂದ  ಅಸ್ತಿತ್ವಕ್ಕೆ  ತರಬೇಕೆಂದು ಬೇಡಿಕೆಯನ್ನು ಇಟ್ಟಿದ್ದೇವೆ ಇದಕ್ಕಾಗಿ ನಾವು  ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ. ಯಸ್ಯ ಡಿಯೂರಪ್ಪನವರನ್ನು ಮತ್ತು ಬೊಮ್ಮನಹಳ್ಳಿ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಸತೀಶ್ ರೆಡ್ಡಿ ಅವರನ್ನು ಭೇಟಿಯಾಗಿ ಮನವಿ ಪತ್ರವನ್ನು ಸಲ್ಲಿಸಿದ್ದೇವೆ. ಈ ಪ್ರಯತ್ನದಲ್ಲಿ ನಮ್ಮೊಂದಿಗೆ ಕೈಜೋಡಿಸಿ ನಮ್ಮ ಈಗಿನ ಜನಾಂಗದ ನಮ್ಮ ಮಕ್ಕಳಿಗಾಗಿ ಮತ್ತು ಮುಂದಿನ ಪೀಳಿಗೆಗಾಗಿ ಭದ್ರವಾದ ಭವಿಷ್ಯವನ್ನು ಬೆಳಗಿಸೋಣ. 

ನಿಮ್ಮ 

ದೇವಾಂಗ ವರ್ಲ್ಡ್ 
ಶ್ರೀ ಸೆಂಥಿಲ್ ಕುಮಾರ್ ಕೃಷ್ಣಸ್ವಾಮಿ

Image: 
Categories: 
Share Share
Scroll to Top