88929 25504
 
  • Total Visitors: 3745796
  • Unique Visitors: 308280
  • Registered Users: 35949

Error message

  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).

  • Deprecated function: implode(): Passing glue string after array is deprecated. Swap the parameters in drupal_get_feeds() (line 394 of /home4/devan1ay/public_html/includes/common.inc).

ಕೊಳ್ಳೇಗಾಲದಲ್ಲಿ `ಕತ್ತಿ ಹಬ್ಬ’ ; ಮೆರವಣಿಗೆಗೆ ದೇವಾಂಗ ಸಮುದಾಯ

Courtesy : http://www.justkannada.in/

ಚಾಮರಾಜನಗರ  ಜಿಲ್ಲೆಯ ಕೊಳ್ಳೇಗಾಲದಲ್ಲಿ ದೇವಾಂಗ ಸಮುದಾಯ  ಕಳೆದ ಹಲವಾರು ದಶಕಗಳಿಂದ  ಆಚರಿಸಿಕೊಂಡು ಬಂದಿರುವ ಶ್ರೀ ರಾಮಲಿಂಗ ಚೌಡೇಶ್ವರಿ ` ಕತ್ತಿ ಹಬ್ಬ’  ಈ ವರ್ಷ ಮತ್ತೆ ಆರಂಭವಾಗಿದೆ. ಕಳೆದ ಎರಡು ದಿನಗಳಲ್ಲಿ ದೇವಾಂಗ ಸಮುದಾಯ ದೇವರಿಗೆ ವಿವಿಧ ಪೂಜಾ-ಕೈಂಕರ್ಯಗಳು ಹಾಗೂ ಸೇವೆಯನ್ನು ನೆರವೇರಿಸಿದೆ.

ಕೊಳ್ಳೇಗಾಲದಲ್ಲಿ ದೇವಾಂಗ ಸಮುದಾಯ ಆಚರಿಸುವ ದೇವಲ-ಜಯಂತಿ, ಚೌಡೇಶ್ವರಿ ನವರಾತ್ರಿ ಹಬ್ಬ, ಜನಿವಾರ ಹಬ್ಬ, ಕತ್ತಿ ಹಬ್ಬ, ಗಿ ರಿಜಾ ಕಲ್ಯಾಣ ಹಾಗೂ ಚಾರಿಯೆಟ್ ಹಬ್ಬಗಳನ್ನು ಭಕ್ತ ಭಾವದಿಂದ ಆಚರಿಸಿಕೊಂಡು ಬರುತ್ತಿದೆ. ಈ ಪೈಕಿ ರಾಮಲಿಂಗ ಚೌಡೇಶ್ವರಿ ಕತ್ತಿಹಬ್ಬ ಅತ್ಯಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಆದಗ್ಯೂ, ಪ್ರತೀ ಹಬ್ಬಗಳಿಗೂ ತನ್ನದೇ ಆದ ವೈಶಿಷ್ಟ್ಯತೆಯನ್ನೊಂದಿದೆ. ಈ ಸಂಬಂಧ ದೇವಾಂಗ ಸಮುದಾಯದ ಮುಖಂಡ ಎನ್.ಚಂದ್ರಶೇಖರಯ್ಯ, ಕತ್ತಿಹಬ್ಬಕ್ಕೆ ಸಂಬಂಧಿಸಿದಂತೆ ವಿವರಿಸಿದ ಮಾಹಿತಿ ಹೀಗಿದೆ…….

`ಕತ್ತಿಹಬ್ಬ’  ಕೇವಲ ಹಬ್ಬವಾಗಿ ಮಾತ್ರ ಆಚರಣೆಯಲ್ಲಿಲ್ಲ. ಬದಲಾಗಿ ದೇಶಗಳ ನಾನಾ ಭಾಗಗಳಲ್ಲಿ ವಾಸಿಸುತ್ತಿರುವ ದೇವಾಂಗ ಸಮುದಾಯವನ್ನು ಒಗ್ಗೂಡಿಸುವ ನಿಟ್ಟಿನಲ್ಲೂ ಈ ಹಬ್ಬ ಪ್ರಮುಖ ಪಾತ್ರ ನಿರ್ವಹಿಸುತ್ತದೆ.  ಜೊತೆಗೆ ಸಮುದಾಯದಲ್ಲಿ ರುವ ಸಾಂಸ್ಕೃತಿಕ ನೆಲೆಗಟ್ಟನ್ನು ಬಿಂಬಿಸುತ್ತದೆ.

ಇದು, ಕೇವಲ ಕೊಳ್ಳೇಗಾಲದಲ್ಲಿರುವ ದೇವಾಂಗ ಸಮುದಾಯಕ್ಕೆ ಮಾತ್ರ ಸೀಮಿತವಾಗಿರದೇ ಸುತ್ತಮುತ್ತಲ ನಿವಾಸಿಗಳೂ ಸಹ  ಈ ಹಬ್ಬಕ್ಕಾಗಿ ಪಟ್ಟಣದಲ್ಲಿ ಸೇರುತ್ತಾರೆ. ಸಮುದಾಯದ ಹಲವರು ವಿದೇಶ ದಲ್ಲೂ ನೆಲೆಕಂಡುಕೊಂಡಿದ್ದಾರೆ. ಇತರ ಸಮುದಾಯದ ಮಂದಿಯೂ ಸಕ್ರಿಯವಾಗಿ ಭಾಗವಹಿಸಿ ಈ ಹಬ್ಬಕ್ಕೆ ಮತ್ತಷ್ಟು ಕಳೆತುಂಬುತ್ತಾರೆ. ಅಲ್ಲದೇ, ದೇವಾಂಗ ಸಮುದಾಯದ ಜನರೊಂದಿಗೆ ಇತರ ವರ್ಗದವರು ಬೆರೆಯುವ ಮೂಲಕ  ಹಬ್ಬ  ಬ್ರಾತೃತ್ವವನ್ನು ಬೆಸೆಯುತ್ತಿದೆ.

devanga-kollegala-kathi-habba-celebration

1962 ರಲ್ಲಿ ನಡೆದ ಕತ್ತಿಹಬ್ಬದ ಮೆರವಣಿಗೆಯ ಅಪರೂಪದ ಚಿತ್ರ

`ಕತ್ತಿ ಹಬ್ಬ’  ಕಳೆದ 9 ಕ್ಕೂ ಹೆಚ್ಚು ದಶಕಗಳಿಂದಲೂ ದೇವಾಂಗ ಸಮುದಾಯದವರು  ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರುತ್ತಿದ್ಧಾರೆ. ಆದರೆ 9 ದಶಕಗಳ ಪೈಕಿ 1921,  1962, 1982 ಮತ್ತು 199 9 ನಾಲ್ಕು ಬಾರಿ ಮಾತ್ರ ಆಚರಣೆಯಾಗಿದೆ. 1999 ರ ನಂತರ ಅಂದರೆ 16 ವರ್ಷಗಳ ಬಳಿ ಕ ದೇವಾಂಗ ಸಮುದಾಯದ ಮುಖಂಡರು 2015 ರ ಜ.22 ರಿಂದ ಫೆ.1 ರವರೆಗೆ 11 ದಿನಗಳ ಕಾಲ ಶ್ರೀ ರಾಮಲಿಂಗ ಚೌಡೇಶ್ವರಿ ಹಬ್ಬವ ನ್ನು ವೈಭವದಿಂದ ಭಕ್ತಪೂರ್ವಕವಾಗಿ ಆಚರಿಸಲು ತೀರ್ಮಾನಿಸಿದ್ಧಾರೆ.

ದೇವಾಂಗ ಸಮುದಾಯದ ಗುರುಗಳು ಹಾಗೂ ಹಂಪಿ ಪೀಠಾಧ್ಯಕ್ಷರಾದ ದಯಾನಂದಪುರಿ ಸ್ವಾಮೀಜಿ ಅವರು ಈ ಕತ್ತಿಹಬ್ಬಕ್ಕೆ ಬೆನ್ನೆಲು ಬಾಗಿ ನಿಂತು ಪ್ರೋತ್ಸಾಹಿಸುತ್ತಿದ್ಧಾರೆ. ಈ ಹಬ್ಬದ ಮ ತ್ತೊಂದು ವಿಶೇಷತೆಯೆಂದರೆ ಕವಿರತ್ನ ಕಾಳಿದಾಸ ಹಾಗೂ ಆದಿಶಂಕರಾಚಾರ್ಯ ಮತ್ತಿತರ ಋಷಿಮುನಿಗಳು ದೇವಿ ಭಗವತ ಅಥವಾ ದೊಡ್ಡಕತ್ತಿಹಬ್ಬ ಹಾಗೂ ಹಲಗೋತ್ಸವ ಎಂದು ಇತಿಹಾಸ ಪ್ರಸಿದ್ದಿಗೆ ಸಾಕ್ಷಿಯಾಗಿರುವ ಚೌ ಡೇಶ್ವರಿ ದೇವಿಯ ಮಹಿಮೆಯನ್ನು ದಾಖಲಿಸಿದ್ದಾರೆ. ಅಲ್ಲದೇ, ಬ್ರಿಟೀಷರ ಕಾಲದಿಂದಲೂ ಮೈಸೂರು ಅರಸರೂ ಈ ಹಬ್ಬವನ್ನು ವೈಭವ ದಿಂದ ಆಚರಿಸಿಕೊಂಡು ಬಂದಿರುವ ಕುರಿತು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

ಹಲಗೋತ್ಸವ ಉತ್ಸವ ಬಗ್ಗೆ ನಡೆದಿರುವ ಸಂಶೋಧನೆಯಲ್ಲಿ ಕತ್ತಿಹಬ್ಬದ ಆಚರಣೆಯು ಸತ್ಯಯುಗದ ಕಾಲದಲ್ಲೂ ತಳುಕು ಹಾಕಿಕೊಂಡಿದೆ ಎನ್ನಲಾಗಿದೆ.

ಚೌಡೇಶ್ವರಿ ದೇವಿಯ ಮಹಿಮೆ ಹಿನ್ನೆಲೆ:

devanga-kollegala-kathi-habba-celebration

ದೇವಾಂಗ ಸಮುದಾಯದವರ ಈ ಹಬ್ಬಕ್ಕೆ ಅನ್ಯ ಧರ್ಮೀಯರು ಸಹ ಸಾಥ್ ನೀಡುವುದು ವಿಶೇಷ.

ಸತ್ಯಯುಗದಲ್ಲಿ ದೇವಾನುದೇವತೆಗಳೂ ಸಹ ಸಂಪೂರ್ಣವಾಗಿ ವಿವಸ್ತ್ರವಾಗಿ ಮಾನುಕುಲದಿಂದ ದೂರವಿದ್ದರು. ಎಲ್ಲ ದೇವಾನುದೇವತೆಗ ಳು, ರಾಕ್ಷಸರು, ಯಕ್ಷ-ಕಿನ್ನರರು, ಕಿಂಪುರುಷರು ಶಿವ ಪಾರ್ವತಿ ಬಳಿ ಈ ಕುರಿತು ಅಳಲು ತೋಡಿಕೊಳ್ಳುತ್ತಾರೆ. ವಿಷಯವನ್ನು ತಿಳಿದ ಶಿವ ತನ್ನ ಮೂರನೇ ಕಣ್ಣನ್ನು ತೆರೆದು ದೇವಲ ಮಹರ್ಷಿಗಳಿಗೆ ದೇವತೆಗಳ ಅಸ್ವಸ್ಥತೆಯನ್ನು ಸರಿಪಡಿಸಿ ಅವರ ದೇ ಹದ ಮೇಲೆ ವಸ್ತ್ರ, ಕೈಯ್ಯಲ್ಲಿ ದಂಡ ಹಾಗೂ ಕಮಂಡಲ ಇರಬೇಕು ಎಂದು ಆಜ್ಞಾಪಿಸುತ್ತಾನೆ.

ಶಿವನ ಮಾತುಗಳನ್ನು ಕೇಳುತ್ತಿದ್ದಂತೆ ದೇವಲ ಮಹರ್ಷಿ ಈ ಕಾರ್ಯವನ್ನು ನಾನು ಹೇಗೆ ಮಾಡಲು ಸಾಧ್ಯ ಎಂದು ಅಸಹಾಯಕತೆ ಪ್ರದ ರ್ಶಿಸುತ್ತಾರೆ. ಆಗ ದೇವಲ ಮಹರ್ಷಿಯನ್ನು ಕುರಿತು ಶಿವ ನೀನು ಈಗ ಭಗವಾನ್ ವಿಷ್ಣುವಿನ ಬಳಿ ಹೋಗು. ಅವನಿಂದ ಬೀಜವನ್ನು ಪಡೆದು ಬಂದು ಹತ್ತಿಯನ್ನು ಬೆಳೆಯಲಾರಂಭಿಸು. ಬರುವ ಹತ್ತಿಯಿಂದ ಬಟ್ಟೆಯನ್ನು ತಯಾರಿಸು ದೇವತೆಗಳಿಗೆ ನೀಡು ಎಂದು ಸಲಹೆ ನೀಡುತ್ತಾನೆ.

ವಿಷ್ಣುವಿನ ಬಳಿ ಹೋಗಿ ಹತ್ತಿ ಬೀಜಪಡೆದು ಹಿಂದಿರುಗುವಾಗ ದೇವಲ ಮಹರ್ಷಿಗೆ ಹಲವು ಅಡ್ಡಿ ಆತಂಕಗಳು ಎದುರಾಗುತ್ತವೆ. ಇದರಿಂದ ತನ್ನನ್ನು ರಕ್ಷಿಸು ಎಂದು ಆದಿಪರಾಶಕ್ತಿಯನ್ನು ಪ್ರಾರ್ಥಿಸು ತ್ತಾನೆ. ಚೌಡೇಶ್ವರಿ ರೂಪದಲ್ಲಿ ಪ್ರತ್ಯಕ್ಷವಾಗುವ ಆದಿಪಾರಶಕ್ತಿ ತನ್ನ ಮಾನಸ ಪುತ್ರನಿಗೆ ಎದುರಾಗಿರುವ ಸಂಕಷ್ಟದಿಂದ ಪಾರು ಮಾಡುತ್ತಾಳೆ. ದೇವತೆಗಳ ಮುಖ್ಯ ವಾಸ್ತುಶಿಲ್ಪಿಗಳ ಸಹಾಯ ಪಡೆದು ಬಟ್ಟೆಯನ್ನು ನೇಯಲು ಬೇಕಾದ ಯಂತ್ರವನ್ನು ಪಡೆ ಎಂದು  ಚೌಡೇಶ್ವರಿದೇವಿ ಸಲಹೆ ನೀಡುತ್ತಾಳೆ. ಬಳಿಕ ಶಿವನಿಂದ ನಂದಿಧ್ವಜ, ವಿಷ್ಣುವಿನಿಂದ ಚಕ್ರ ಹಾಗೂ ಬ್ರಹ್ಮನಿಂದ ತೇಜಸ್ಸನ್ನು ವರ ವಾಗಿ ಪಡೆಯುತ್ತಾನೆ. ನಂತರ ಸೂರ್ಯದೇವನ ಮಗಳು ದೇವದತ್ತೆಯನ್ನು ಮದುವೆಯಾಗುತ್ತಾನೆ. ಅಲ್ಲದೇ, ಆಯೋಧನ ಗಿರಿಯ ಆಳ್ವಿಕೆಯನ್ನು ಆರಂಭಿಸುತ್ತಾನೆ. ಜೊತೆಜೊತೆಗೆ ದೊಡ್ಡ ಪ್ರ ಮಾಣದ ಬಟ್ಟೆ ನೇಯುವ ಕಾರ್ಖಾನೆಯನ್ನು ದೇವಲ ಮಹರ್ಷಿ ಸ್ಥಾಪಿಸುತ್ತಾನೆ ಎಂಬುದು ಈ ಕತ್ತಿಹಬ್ಬ ಆಚರಣೆಗಿರುವ ಹಿನ್ನೆಲೆ.

Image: 
Categories: 
Share Share
Scroll to Top