88929 25504
 
  • Total Visitors: 3745125
  • Unique Visitors: 308127
  • Registered Users: 35949

Error message

  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).

  • Deprecated function: implode(): Passing glue string after array is deprecated. Swap the parameters in drupal_get_feeds() (line 394 of /home4/devan1ay/public_html/includes/common.inc).

ನಂದಿಗಿರಿ ಪ್ರದಕ್ಷಿಣೆ 

ಧನ್ಯವಾದಗಳು :vijayavani.net

ಚಿಕ್ಕಬಳ್ಳಾಪುರ: ಪ್ರತಿ ವರ್ಷದಂತೆ ಈ ಬಾರಿಯೂ ಆಷಾಢ ಮಾಸದ ಕೊನೇ ಸೋಮವಾರ ನಂದಿಗಿರಿ ಪ್ರದಕ್ಷಿಣೆ ಶ್ರದ್ಧಾಭಕ್ತಿಯಿಂದ ನಡೆಯಿತು.

ಪಂಚಗಿರಿ (ನಂದಿಗಿರಿ, ಗೋಪಿನಾಥಗಿರಿ, ದಿಬ್ಬಗಿರಿ, ಬ್ರಹ್ಮಗಿರಿ, ಚನ್ನಗಿರಿ) ಪ್ರದಕ್ಷಿಣೆ ಮಾಡಿದರೆ ಕಾಶಿಗೆ ಹೋಗಿ ಬಂದಷ್ಟು ಪುಣ್ಯ ಸಿಗಲಿದೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ನಂದಿಗಿರಿಗೆ ಭಕ್ತರು ಪ್ರತಿವರ್ಷ ಪ್ರದಕ್ಷಿಣೆ ಕೈಗೊಳ್ಳುತ್ತಾರೆ. ಶ್ರೀ ನಂದಿಗಿರಿ ಪ್ರದಕ್ಷಿಣಾ ಸೇವಾ ಟ್ರಸ್ಟ್ ಕಾರ್ಯಕ್ರಮ ಆಯೋಜಿಸುತ್ತಿದೆ.

ಭಾನುವಾರ ರಾತ್ರಿಯೇ ಹಲವರು ನಂದಿ ಶ್ರೀ ಭೋಗನಂದೀಶ್ವರಸ್ವಾಮಿ ದೇವಾಲಯ ಬಳಿ ಜಮಾಯಿಸಿದ್ದರು. ಇವರೊಂದಿಗೆ ಸೋಮವಾರ ಬೆಳಗ್ಗೆಯೆ ಸಾವಿರಾರು ಮಂದಿ ಜತೆಗೂಡಿದರು. ಪ್ರದಕ್ಷಿಣೆಗೆ ಮುನ್ನ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು. ಹಂಪಿ ಶ್ರೀ ಗಾಯತ್ರಿ ಪೀಠ ಮಹಾಸಂಸ್ಥಾನದ ಶ್ರೀ ದಯಾನಂದಪುರಿ ಸ್ವಾಮೀಜಿ, ದೊಡ್ಡಬಳ್ಳಾಪುರ ತಪಸೀಹಳ್ಳಿಯ ಪುಷ್ಪಾಂಡಜ ಮಹರ್ಷಿ ಆಶ್ರಮದ ಶ್ರೀ ದಿವ್ಯ ಜ್ಞಾನಾನಂದ ಸ್ವಾಮೀಜಿ ವಿಧ್ಯುಕ್ತ ಚಾಲನೆ ನೀಡಿದರು.

ವಿವಿಧ ವಯೋವರ್ಗದವರು ದೇವರ ನಾಮಸ್ಮರಣೆಯೊಂದಿಗೆ ಹೆಜ್ಜೆ ಹಾಕಿದರು. ಗರ್ಭಿಣಿಯರೂ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ವಿವಿಧ ಭಜನಾ ಸಂಘಟನೆಗಳು ಪಾಲ್ಗೊಂಡಿದ್ದವು. ಚಿಕ್ಕಬಳ್ಳಾಪುರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ದೇವನಹಳ್ಳಿ, ಕೋಲಾರ ಜಿಲ್ಲೆ, ಬೆಂಗಳೂರು ನಗರ ಮಾತ್ರವಲ್ಲದೆ, ಆಂಧ್ರಪ್ರದೇಶದ ಹಿಂದೂಪುರ, ತಮಿಳುನಾಡಿನ ಚೆನ್ನೈ ಮತ್ತಿತರೆಡೆಯಿಂದ ಹಾಗೂ ಒಡಿಶಾದಿಂದಲೂ ಭಕ್ತರು ಪಾಲ್ಗೊಂಡಿದ್ದರು.

ಭಕ್ತರಿಂದ 14 ಕಿ.ಮೀ. ಸಂಚಾರ

ನಂದಿ ದೇವಾಲಯದಿಂದ ಪ್ರಾರಂಭವಾಗುವ ಭಕ್ತರ ಮೆರವಣಿಗೆ ಅಂಗಟ್ಟ, ಈರೇನಹಳ್ಳಿ, ಕುಡವತಿ, ಕಾರಹಳ್ಳಿ ಕ್ರಾಸ್, ಬೆಟ್ಟದ ಕ್ರಾಸ್, ಹೆಗ್ಗಡಿಹಳ್ಳಿ, ಗಾಂಧಿಪುರ, ಕಣಿವೆ ಬಸವಣ್ಣ, ಸುಲ್ತಾನ್ ಪೇಟೆ ಮಾರ್ಗವಾಗಿ ಸುಮಾರು 14 ಕಿ.ಮೀ. ಸಾಗಿ ಮತ್ತೆ ದೇಗುಲ ಆವರಣದಲ್ಲೇ ಜಮಾಯಿಸುವುದು ವಾಡಿಕೆ. ಮಾರ್ಗ ಮಧ್ಯೆ ಅಲ್ಲಲ್ಲಿ ಉಪಾಹಾರ, ಪಾನೀಯ, ಹಣ್ಣು, ನೀರು ವಿತರಣೆ ವ್ಯವಸ್ಥೆ ಮಾಡಲಾಗಿತ್ತು.

ಮಣ್ಣು ಕುಸಿದು ಆತಂಕ

ಮಳೆಯಿಂದಾಗಿ ಕಣಿವೆ ಬಸವೇಶ್ವರ ಸ್ವಾಮಿ ದೇವಾಲಯ ಬಳಿ ರಸ್ತೆ ಎರಡೂ ಬದಿಯ ಎತ್ತರದ ಪ್ರದೇಶದಲ್ಲಿ ತೇವಾಂಶ ಹೆಚ್ಚಾಗಿ ಮಣ್ಣು ಕುಸಿದು ರಸ್ತೆ ಅರ್ಧದಷ್ಟು ಭಾಗ ಆವರಿಸಿತ್ತು. ಮತ್ತೊಮ್ಮೆ ಕುಸಿದು ಬೀಳಬಹುದೆಂಬ ಆತಂಕದಲ್ಲೇ ಭಕ್ತರು ಪ್ರದಕ್ಷಿಣೆ ಮಾಡಬೇಕಾಯಿತು.

Image: 
Categories: 
Share Share
Scroll to Top